ಪಲ್ನಾಡು(ಆಂಧ್ರಪ್ರದೇಶ): ಸಾವು ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಈಗ ಚೆನ್ನಾಗಿಯೇ ಇದ್ದವರು ಕೆಲ ಕ್ಷಣದಲ್ಲೇ ಇದ್ದಕ್ಕಿದ್ದಂತೆ ಪ್ರಾಣ ಕಳೆದುಕೊಳ್ಳುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಆಂದ್ರದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯಲ್ಲಿ ನಡೆದಿದೆ. ಯುವಕನೊಬ್ಬ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕುಸಿದುಬಿದ್ದಿದ್ದು, ಆತನ ಪ್ರಾಣ ಪಕ್ಷಿ ಅಲ್ಲೇ ಹಾರಿ ಹೋಗಿದೆ.
ಮೃತನನ್ನು ಕಿಶೋರ್ ಎಂದು ಗುರುತಿಸಲಾಗಿದೆ. ಚಿಲಕಲೂರಿಪೇಟೆ ಪುರಸಭೆ ಮಾಜಿ ಅಧ್ಯಕ್ಷ ದಿವಂಗತ ಮಲ್ಲೇಲ ಬುಚ್ಚಯ್ಯ ಅವರ ಮೊಮ್ಮಗ ಕಿಶೋರ್ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ . ಖಾಸಗಿ ಷಟಲ್ ಕ್ಲಬ್‌ನಲ್ಲಿ ಶಟಲ್ ಕಾಕ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತಯೇ ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಕಿಶೋರ್‌ನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಈಗಾಗಲೇ ಕಿಶೋರ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿಶೋರ್ ಹಠಾತ್ ಸಾವಿನಿಂದ ಸ್ನೇಹಿತರು ಮತ್ತು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
ಹಠಾತ್ ಹೃದಯಾಘಾತ ಮತ್ತು ತಲೆಯಲ್ಲಿ ನರಗಳು ತುಂಡಾಗುವ ಸಂದರ್ಭಗಳಲ್ಲಿ ಇಂತಹ ಸಾವುಗಳು ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.
BIGG NEWS : ರಾಜ್ಯದಲ್ಲಿ ಜುಲೈ 16 ರಿಂದ `ಪೌತಿಖಾತೆ’ ಅಭಿಯಾನ : ಕಂದಾಯ ಸಚಿವ ಆರ್. ಅಶೋಕ್
ಅಫ್ಘಾನಿಸ್ತಾನಕ್ಕೆ ಅಗತ್ಯವಿರುವ ಎಲ್ಲಾ ಸಂಭಾವ್ಯ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಭಾರತ ಸಿದ್ಧ: ಪ್ರಧಾನಿ ಮೋದಿ