ಟ್ವಿಟರ್‌ನಲ್ಲಿ ಸುದೀಪ್‌ಗೆ ಬುದ್ದಿ ಹೇಳಲು ಹೋಗಿ ‘ಎಡವಿದ’ ಡಿ ಬಾಸ್‌ ಅಭಿಮಾನಿ – Kannada News Now


Film Sandalwood State

ಟ್ವಿಟರ್‌ನಲ್ಲಿ ಸುದೀಪ್‌ಗೆ ಬುದ್ದಿ ಹೇಳಲು ಹೋಗಿ ‘ಎಡವಿದ’ ಡಿ ಬಾಸ್‌ ಅಭಿಮಾನಿ

ನ್ಯೂಸ್‌ಡೆಸ್ಕ್: ಭಾನುವಾರ ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ನಿತ್ಯೋತ್ಸವ ಕೆ. ಎಸ್. ನಿಸ್ಸಾರ್ ಅಹ್ಮದ್ ನಿಧನರಾಗಿದ್ದಾರೆ. ಈ ವೇಳೆ ನಿಸ್ಸಾರ್ ಅಹ್ಮದ್ ಅವರ ನಿಧನಕ್ಕೆ ಸುದೀಪ್‌ ಅವರು ಕೂಡ ಸಂತಾಪ ವ್ಯಕ್ತಪಡಿಸುತ್ತಿದ್ದ ವೇಳೆಯಲ್ಲಿ ನಿತ್ಯೋತ್ಸವ ಎನ್ನುವುದರ ಬದಲಿಗೆ ನಿತ್ಯೊತ್ಸವ ಅಂತ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ಸುದೀಪ್ ಅವರ ಕಾಲೆಳೆಯಲು ಮುಂದಾದರು. ಇದೇ ವೇಳೆ ಡಿ ಬಾಸ್ ಅಡ್ಡ ಎನ್ನುವ ಹೆಸರಿನ ಟ್ವಿಟರ್‌ ಅಕೌಂಟ್‌ ಹೆಸರಿನ ವ್ಯಕ್ತಿಯೊಬ್ಬರು ಸುದೀಪ್‌ಗೆ ಬುದ್ದಿ ಹೇಳಲು ಹೋಗಿ ತಾವೇ ಯಡವಟ್ಟು ಮಾಡಿಕೊಂಡ ಘಟನೆ ಕೂಡ ನಡೆದಿದೆ.

ಹೌದು, ಸುದೀಪ್‌ ಅವರಿಗೆ ಡಿ ಬಾಸ್ ಅಡ್ಡ ಎನ್ನುವ ಹೆಸರಿನಿಂದ ನಿತ್ಯೋತ್ಸವ ಅದು ಮರಾಯ, ಕನ್ನಡ ಸರಿಯಾಗಿ ಬರೆ ಅಂತ ಸುದೀಪ್‌ಗೆ ಬುದ್ದಿ ಹೇಳಿದ್ದಾರೆ.ಸುದೀಪ್‌ಗೆ ಬುದ್ದಿ ಹೇಳುವ ಅವಸರದಲ್ಲಿ ಡಿ ಬಾಸ್ ಅಡ್ಡ ಎನ್ನುವ ಟ್ವಿಟರ್‌ ಅಕೌಂಟ್‌ ಹೊಂದಿರುವವರು ಮಾರಾಯ ಅನ್ನೋ ಬದಲು ಮರಾಯ ಅಂತ ಬಳಕೆ ಮಾಡಿದ್ದು, ಈಗ ಅದು ಹೊಸ ವಿವಾದವನ್ನು ಪಡೆದುಕೊಂಡಿದ್ದೆ. ಇನ್ನೋಬ್ಬರ ತಪ್ಪನ್ನು ಎತ್ತಿ ಹಿಡಿಯುವ ಮುನ್ನ ತಮ್ಮ ತಪ್ಪನ್ನು ಮೊದಲು ಸರಿ ಮಾಡಿಕೊಳ್ಳಬೇಕು, ಅಲ್ಲದೇ ಮೊದಲು ಕನ್ನಡವನ್ನು ಸರಿಯಾಗಿ ಕಲಿಬೇಕು ಅಂತ ಸುದೀಪ್‌ ಅಭಿಮಾನಿಗಳು ಡಿ ಬಾಸ್ ಅಡ್ಡ ಎನ್ನುವ ಟ್ವಿಟರ್‌ ಅಕೌಂಟ್‌ ಹೊಂದಿರುವ ವ್ಯಕ್ತಿಗೆ ಬುದ್ದಿ ಹೇಳುತ್ತಿದ್ದಾರೆ. ಏನೇ ಆಗಲಿ, ಇನ್ನೋಬ್ಬರಿಗೆ ಬುದ್ದಿಹೇಳುವ ಮುನ್ನ ನಾವೇ ಸರಿಯಾಗಿ ಇರಬೇಕು ಎನ್ನುವುದು ಸುದೀಪ್‌ ಅಭಿಮಾನಿಗಳ ಆಸೆಯಾಗಿದೆ.