ಸುಭಾಷಿತ :

Monday, March 30 , 2020 4:22 PM

‘DCM’ ಅಶ್ವಥ್ ನಾರಾಯಣ್ ಮಾಡಿದ ಈ ಆರೋಪಕ್ಕೆ ಕಣ್ಣೀರಿಟ್ಟ ‘ಬೆಂಗಳೂರು ನಗರ ಪೊಲೀಸ್ ಕಮಿಷನರ್’ ಭಾಸ್ಕರ್ ರಾವ್…!


Thursday, March 26th, 2020 8:06 pm

ಬೆಂಗಳೂರು :    ‘ಸೇವೆಯಿಂದ ಬಿಡುಗಡೆ’ ಮಾಡುವಂತೆ ಸಿಎಂ ಯಡಿಯೂರಪ್ಪ ಮುಂದೆ  ಬೆಂಗಳೂರು ನಗರ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಕಣ್ಣೀರಿಟ್ಟ ಘಟನೆ ಇಂದು ನಡೆದಿದೆ.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಭಾರತ ಲಾಕ್ ಡೌನ್ ಆಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ನಡೆದ ಲಾಕ್ ಡೌನ್ ಬಗ್ಗೆ ಸಿಎಂ ಬಿ,ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಈ ಸಂದರ್ಭದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಬೆಂಗಳೂರು ನಗರ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ವಾಗ್ಧಾಳಿ ನಡೆಸಿದರು. ಇದರಿಂದ ಭಾವುಕರಾದ ಕಮಿಷನರ್ ಸಭೆಯಿಂದ ಹೊರ ನಡೆದಿದ್ದರು, ಬಳಿಕ ಸಿಎಂ ಬಿಎಸ್ವೈ ಸಮಾಧಾಪಡಿಸಿದರೂ ಕೂಡ ಭಾಸ್ಕರ್ ರಾವ್ ಸಮಾಧಾನರಾಗಲಿಲ್ಲ..ಕೊನೆಗೆ ಸೇವೆಯಿಂದ ಬಿಡುಗಡೆ’ ಮಾಡುವಂತೆ ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.

ಏನಿದು ಕಮಿಷನರ್ ವಿರುದ್ಧ ಡಿಸಿಎಂ ಆರೋಪ..?

ಬೆಂಗಳೂರಿನಲ್ಲಿ ಇಂದು ನಡೆದ ಲಾಕ್ ಡೌನ್ ವಿಚಾರದಲ್ಲಿ ಕಮಿಷನರ್ ಭಾಸ್ಕರ್ ರಾವ್ ರಾಜಕೀಯ ಮಾಡಿದ್ದಾರೆ. ಕೆಲವು ಶಾಪ್ ಗಳಿಗೆ ಮಾತ್ರ ಅನುಮತಿ ಕೊಟ್ಟಿದ್ದಾರೆ, ಲಾಕ್ ಡೌನ್ ಅಂದರೆ ಎಲ್ಲಾ ಬಂದ್ ಆಗಬೇಕು,,ಕೆಲವೊಂದು ಶಾಪ್ ಗಳಿಂದ ಹಣ ಪಡೆದು ಅಂಗಡಿ ತೆರೆಯಲು ಅನುಮತಿ ನೀಡಿದ್ದಾರೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಹೇಳಿದ್ದಾರೆ.  ಸೂಪರ್ ಮಾರ್ಕೆಟ್ ಓಪನ್ ಹೇಗಾಯ್ತು.?  ಕಮಿಷನರ್ ಅನುಮತಿ ನೀಡಿರುವುದು ಹೇಗೆ.? ಡಿಸಿಎಂ ಆರೋಪಕ್ಕೆ ಕಮಿಷನರ್ ಒಂದು ಕ್ಷಣ ಕಂಗಾಲಾದರು.

ಇದಲ್ಲದೇ ಪಾಸ್ ವಿತರಣೆ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಮಿಷನರ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು, ಈ ಹಿನ್ನೆಲೆ ಭಾಸ್ಕರ್ ರಾವ್ ಭಾವುಕರಾಗಿದ್ದರು, ಅಲ್ಲದೇ ಸಭೆಯಲ್ಲಿ ಕಮಿಷನರ್ ಹಾಗೂ ಡಿಸಿಎಂ ವಿರುದ್ಧ ಮಾತಿನ ಚಕಮಕಿಯೇ ನಡೆಯಿತು. ನಾನು ತಿಳಿದುಕೊಂಡೇ ಈ ಆರೋಪ ಮಾಡಿದ್ದೇನೆ ಎಂದು ಸಿಎಂ ಬಳಿ ಹೇಳಿದ ಡಿಸಿಎಂ ಸ್ಪಷ್ಟನೆ ನೀಡಿದರು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions