
ಹೊರೆ ಇಲ್ಲ, ಜನರ ಒಳಿತಿನ ಸಂಕಷ್ಟ ಕಾಲದ ಸಮತೋಲಿತ ಬಜೆಟ್ – DCM ಡಾ.ಅಶ್ವತ್ಥ್ ನಾರಾಯಣ
ಬೆಂಗಳೂರು : ಕೋವಿಡ್ನಿಂದ ಉಂಟಾದ ಆರ್ಥಿಕ ಸವಾಲುಗಳ ನಡುವೆಯೂ ಜನರಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದ ಹಾಗೂ ಕೃಷಿ, ಶಿಕ್ಷಣ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಪೂರಕವಾದ ಸಮಗ್ರ ದೃಷ್ಟಿಕೋನದ ಸಮತೋಲಿತ 2021ನೇ ಸಾಲಿನ ಮುಂಗಡಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದಾರೆಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು; “ಕೋವಿಡ್ ಸಂಕಷ್ಟವು ಆರ್ಥಿಕ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು. ಜನತೆಗೆ ತೀವ್ರ ಸಮಸ್ಯೆಗಳನ್ನು ಸೃಷ್ಟಿ ಮಾಡಿತು. ಆರ್ಥಿಕ-ಉದ್ಯೋಗ ನಷ್ಟದಿಂದ ಇಡೀ ರಾಜ್ಯ ಕಂಗಾಲಾಗಿತ್ತು. ಇಂಥ ಸಂಕಷ್ಟ ಕಾಲದಲ್ಲಿ ಸಂಜೀವಿನಿಯಂತೆ ಬಜೆಟ್ ಮೂಡಿಬಂದಿದೆ. ಹೊಸ ಭರವಸೆಯನ್ನು ತಂದಿದೆ ಎಂದರು.
ರಾಜ್ಯ ಬಜೆಟ್ ಹೈಲೈಟ್ಸ್ : ವಲಯ.03- ‘ಆರ್ಥಿಕ ಅಭಿವೃದ್ಧಿ ಪ್ರಚೋದನೆ’ ಸಂಬಂಧಿಸಿದಂತ ‘ಬಜೆಟ್ ಹೈಲೈಟ್ಸ್’
ಸಾಮಾಜಿಕ ನ್ಯಾಯವನ್ನು ಈ ಬಜೆಟ್ ಎತ್ತಿ ಹಿಡಿದಿದ್ದು, 30 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಇನ್ನು, ರಾಜ್ಯದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ 52,529 ಕೋಟಿ ರೂ.ಗಳ ಅನುದಾನವನ್ನೂ ಬಜೆಟ್ನಲ್ಲಿ ಪ್ರಕಟಿಸಲಾಗಿದೆ ಎಂದ ಅವರು; ಕ್ವಾಂಟಂ ತಂತ್ರಜ್ಞಾನ ಅಭಿವೃದ್ಧಿಗೆ 10 ಕೋಟಿ ರೂ. ಮೀಸಲಿಟ್ಟು ʼಸಂಶೋಧನಾ ಪಾರ್ಕ್ʼ ಸ್ಥಾಪನೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು.
2021-22ನೇ ಸಾಲಿನ ರಾಜ್ಯ ಬಜೆಟ್ : ಯಾವ ಸಮುದಾಯಕ್ಕೆ ಎಷ್ಟು ಅನುದಾನ.? ಇಲ್ಲಿದೆ ಮಾಹಿತಿ
ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟ ಬಜೆಟ್
ರಾಷ್ಟ್ರೀಯ ಶಿಕ್ಷಣ ನೀತಿ ಇದೇ ವರ್ಷ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಶಿಕ್ಷಣಕ್ಕೆ ಬಜೆಟ್ನಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ʼಶೈಕ್ಷಣಿಕ ನಾಯಕತ್ವʼ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಮೂಲಕ ರಾಜ್ಯದ ವಿವಿಗಳಲ್ಲಿ ನಾವಿನ್ಯತೆ, ಸಂಸೋಧನೆ, ಬಹಶಿಸ್ತಿನ ಅಧ್ಯಯನ, ನಾಯಕತ್ವ ನಿರ್ಮಾಣಕ್ಕೆ ಒತ್ತು ನೀಡಲಾಗದೆ ಎಂದರು ಡಿಸಿಎಂ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಕ್ಕಳ ನಡುವೆ ಡಿಜಿಟಲ್ ಅಂತರ ಆಲಿಸಿಹಾಕುವ ಹಾಗೂ ಸ್ಮಾರ್ಟ್ಕ್ಲಾಸ್ ರೂಮ್ಗಳನ್ನು ಅಭಿವೃದ್ಧಿಪಡಿಸುವ ಅಂಶವನ್ನು ಮುಂಗಡ ಪತ್ರದಲ್ಲಿ ಘೋಷಿಸಲಾಗಿದೆ. ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್) ಅನುಷ್ಠಾನಕ್ಕೆ ಅನುಕೂಲ. ಈ ಕಾರ್ಯಕ್ರಮಕ್ಕೆ 50 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದರು ಡಿಸಿಎಂ.
ಚರ್ಮದ ಬಣ್ಣ, ದೈಹಿಕ ನೋಟಕ್ಕೆ ಖಿನ್ನತೆಗೊಳಗಾದ 11ನೇ ತರಗತಿ ವಿದ್ಯಾರ್ಥಿ 15ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಸಾಮರ್ಥ್ಯ-ಸಾರಥ್ಯ ಕಾರ್ಯಕ್ರಮ
ಕೇಂದ್ರ ಮತ್ತು ರಾಜ್ಯ ಆಡಳಿತ ಸೇವೆಗಳಲ್ಲಿ ಹಾಗೂ ರೈಲ್ವೆ-ಬ್ಯಾಂಕಿಂಗ್ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಹೆಚ್ಚೆಚ್ಚು ಅವಕಾಶ ಸಿಗುವಂತೆ ಮಾಡಲು ʼಸಾಮರ್ಥ್ಯ- ಸಾರಥ್ಯʼ ಎಂಬ ವಿನೂತ ಕಾರ್ಯಕ್ರಮವನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಐದು ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು 5 ಕೋಟಿ ರೂ. ಅನುದಾನ ಘೋಷಿಸಿರುವುದು ಉತ್ತಮ ಅಂಶವೆಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಇನ್ನು ಉದ್ಯೋಗ ಮಾಡಿಕೊಂಡು ವ್ಯಾಸಂಗ ಮಾಡುವವರಿಗಾಗಿ ಆಯ್ದ ಮಹಾನಗರಪಾಳಿಕೆಗಳ ವ್ಯಾಪ್ತಿಯಲ್ಲಿ ಸಂಜೆ ಕಾಲೇಜುಗಳನ್ನು ಸ್ಥಾಪಿಸುಬ ಬಗ್ಗೆ ಘೋಷಣೆ ಮಾಡಲಾಗಿದೆ. ಇದು ಮಹತ್ವದ ನಿರ್ಧಾರ. ಅದೇ ರೀತಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಿಬ್ಬಂದಿಗೆ ಅರಿವು ಮೂಡಿಸಲು ರಚನಾತ್ಮಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮಾತನ್ನು ಬಜೆಟ್ನಲ್ಲಿ ಹೇಳಲಾಗಿದೆ.
ರಾಜ್ಯ ಬಜೆಟ್ ಹೈಲೈಟ್ಸ್ : ವಲಯ.02- ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತ ಬಜೆಟ್ ಹೈಲೈಟ್ಸ್
ಬೆಂಗಳೂರಿಗೆ ಬೃಹತ್ ಮನ್ನಣೆ
ಈಗಾಗಲೇ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ನಗರವಾಗಿ ಹೊರಹೊಮ್ಮಿರುವ ಬೆಂಗಳೂರು ನಗರವನ್ನು ಇನ್ನು ಬಹು ಆಯಾಮಗಳಲ್ಲಿ ಅಭಿವೃದ್ಧಿಪಡಿಸಲು ಸಂಕಲ್ಪಿಸಲಾಗಿದೆ. ಅದಕ್ಕಾಗಿ ಒಟ್ಟು 7,700 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿರುವುದು ಸಂಪನ್ಮೂಲಗಳ ಕೊರತೆಯ ನಡುವೆಯೂ ಅಭಿವೃದ್ಧಿಯ ಇಚ್ಛಾಶಕ್ತಿಗೆ ಹಿಡಿದ ಕನ್ನಡಿ ಎಂದು ಡಾ.ಅಶ್ವತ್ಥನಾರಾಯಣ ಬಣ್ಣಿಸಿದರು.
43,000 ನೇರ ಉದ್ಯೋಗ ಸೃಷ್ಟಿ
ಎಲೆಕ್ಟ್ರಾನಿಕ್ಸ್ ಸಿಸ್ಟಿಮ್ಸ್ ಮತ್ತು ಅಭಿವೃದ್ಧಿ ನಿರ್ವಹಣಾ ವ್ಯವಸ್ಥೆ (ಇಎಸ್ಡಿಎಂ) ವಲಯದಲ್ಲಿ ಹೂಡಿಕೆ ಆಕರ್ಷಿಸಲು ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿಯೊಂದಿಗೆ ವಿಶೇಷ ಪ್ರೋತ್ಸಾಹಕ ಯೋಜನೆ ರೂಪಿರುವುದು ಸಂತೋಷದ ಸಂಗತಿ. ಈ ಯೋಜನೆಯಡಿ ಜಮೀನು, ಸ್ಥಾವರ, ಯಂತ್ರೋಪಕರಣಗಳ ಮೇಲೆ ಬಂಡವಾಳ ಹೂಡಿಕೆಯ ಮೇಲೆ ಸಹಾಯ ಧನ ಒದಗಿಸಲಾಗುವುದು. ನೋಂದಣಿ, ಮುದ್ರಾಂಕ ಶುಲ್ಕ, ಭೂ ಪರಿವರ್ತನಾ ಶುಲ್ಕಗಳ ಮೇಲೆ ಶೇ.100ರಷ್ಟು ರಿಯಾಯಿತಿ. ಮುಂದಿನ 5 ವರ್ಷಗಳಲ್ಲಿ 43,000 ನೇರ ಉದ್ಯೋಗ ಸೃಷ್ಟಿ ಹಾಗೂ ರಾಜ್ಯಕ್ಕೆ 3,000 ಕೋಟಿ ರೂ ಹೂಡಿಕೆ ನಿರೀಕ್ಷಿಲಾಗಿದೆ ಎಂದರು.
ಬೆಂಗಳೂರು ಜಿಯೋಸ್ಪೆಷಿಯಲ್ ಹಬ್
ಇದರ ಜತೆಗೆ, ಬೆಂಗಳೂರು ನಗರವನ್ನು ʼಜಿಯೋಸ್ಪೆಷಿಯಲ್ ಹಬ್ʼ ಅನ್ನಾಗಿ ರೂಪಿಸುವ ಘೋಷಣೆ ಆಗಿದೆ. ಜಿಯೋಸ್ಪೇಷಿಯಲ್ ತಂತ್ರಜ್ಞಾನಕ್ಕೆ ಮಹತ್ವದ ಕೊಡುವುದು ಇದರ ಉದ್ದೇಶ. ಜತೆಗೆ, ಏರೋಸ್ಪೇಸ್, ಆವಿಷ್ಕಾರ, ನವೋದ್ಯಮಗಳ ಸ್ಥಾಪನೆಗೂ ಒತ್ತು ಕೊಡಲಾಗಿದೆ ಎಂದು ಡಿಸಿಎಂ ಹೇಳಿದರು.
ನಾವಿಣ್ಯತೆ-ಆವಿಷ್ಕಾರಕ್ಕೆ ಒತ್ತು
ಇಡೀ ದೇಶದಲ್ಲಿ ನಾವಿಣ್ಯತೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಸ್ಥಾನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಾಧಾರಿತ ನವೋದ್ಯಮಗಳಿಗೆ ಪ್ರೋತ್ಸಾಹ ಕೊಡಲು 100 ಕೋಟಿ ರೂ. ಮೊತ್ತದ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪನೆ ಮಾಡಲು ನಿರ್ಧರಿಲಾಗಿದೆ. ಇದು ಅತ್ಯಂತ ಶ್ಲಾಘನೀಯ ಸಂಗತಿ ಎಂದು ಡಿಸಿಎಂ ಅಭಿಪ್ರಾಯಪಟ್ಟರು.
ಇದೇ ವೇಳೆ ರಾಜ್ಯಾದ್ಯಂತ ಇರುವ ಸ್ತ್ರೀ ಶಕ್ತಿ ಸ್ವಸಹಾಯ ಸಂಸ್ಥೆಗಳನ್ನು ಬಲಪಡಿಸಲು ʼಸ್ವ ಸಹಾಯ ಗುಂಪುಗಳ ನೀತಿʼ ಜಾರಿಗೆ ತರಲಾಗುತ್ತಿದೆ. ಸಿಎಂ ಅವರು ಆ ಘೋಷಣೆಯನ್ನು ಮಾಡಿದ್ದಾರೆ ಎಂದ ಡಿಸಿಎಂ, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಎಲ್ಲ ಕಾರ್ಯಕ್ರಮಗಳಿಗೆ ಉದಾರವಾದ ಆರ್ಥಿಕ ಸಂಪನ್ಮೂಲ ಒದಗಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ ಎಂದರು.