ಸುಭಾಷಿತ :

Tuesday, April 7 , 2020 6:21 PM

ದಾವಣಗೆರೆಯಲ್ಲಿ ಫೆ.29ರಿಂದ ಮಾ.20ರ ವರೆಗೆ ನಗರದೇವತೆಗಳ ಜಾತ್ರೆ ಹಿನ್ನಲೆ : ಪ್ರಾಣಿಬಲಿ ನಿಷೇಧ


Monday, February 24th, 2020 6:50 pm

ದಾವಣಗೆರೆ  : ನಗರದಲ್ಲಿ ಫೆ.29 ರಿಂದ ಮಾ.20 ರವರೆಗೆ ನಗರದೇವತೆ ಶ್ರೀದುರ್ಗಾಂಬಿಕಾದೇವಿ ಹಾಗೂ ವಿನೋಬನಗರದ ಚೌಡೇಶ್ವರಿದೇವಿ ಜಾತ್ರೆ ನಡೆಯಲಿದ್ದು, ಈ ಜಾತ್ರೆಯಲ್ಲಿ ದೇವರ ಹೆಸರಿನಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳ ಆವರಣದಲ್ಲಿ ಕುರಿ, ಕೋಳಿ ಹಾಗೂ ಕೋಣವನ್ನು ಬಲಿಕೊಡುವಂತಹ ಅನಿಷ್ಟ ಹಾಗೂ ಅನಾಗರಿಕ ಮತ್ತಿತರೆ ಪದ್ದತಿಗಳನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತವು ಕರ್ನಾಟಕ ಪ್ರಾಣಿಬಲಿ ಪ್ರತಿಬಂಧಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.

ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾವಣಗೆರೆ ಉಪ ವಿಭಾಗಾಧಿಕಾರಿ ಮತ್ತು ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶ್ರೀಚೌಡೇಶ್ವರಿದೇವಿ ದೇವಸ್ಥಾನ ಮತ್ತು ವಿನೋಬನಗರ ವ್ಯಾಪ್ತಿಗೆ ದಾವಣಗೆರೆ ತಹಶೀಲ್ದಾರ್ ಇವರನ್ನು ನೇಮಿಸಲಾಗಿದ್ದು, ಕಾಯಿಪೇಟೆ ಮತ್ತು ವಸಂತಟಾಕೀಸ್ ವ್ಯಾಪ್ತಿಗೆ ಮಹಾನಗರಪಾಲಿಕೆ ಆಯುಕ್ತರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions