ನವದೆಹಲಿ: ಇಂದು ನಾಡಿನೆಲ್ಲೆಡೆ ರಕ್ಷಾ ಬಂಧನ್‌ ದಿನಾಚರಣೆ ಆಚರಿಸಲಾಗುತ್ತಿದೆ. ಸಹೋದರ- ಸಹೋದರಿಯ ಬಾಂಧವ್ಯ ಪರಸ್ಪರ ರಾಖಿ ಕಟ್ಟುವ ಮೂಲಕ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ.

ಇಂದು ಗೋಚರಿಸಲಿದೆ ಸೂಪರ್‌ ಮೂನ್:‌ ಸ್ಟರ್ಜನ್ ಸೂಪರ್ಮೂನ್ ಅನ್ನು ನೋಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

 

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ನಿವಾಸದಲ್ಲಿ ರಕ್ಷಾ ಬಂಧನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಗಳ ಮಕ್ಕಳಿಂದ ಪ್ರಧಾನಿ ಮೋದಿ ರಾಖಿ ಕಟ್ಟಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿಯವರ ಮನೆಯಲ್ಲಿ ನಡೆದ ಈ ವಿಶೇಷ ರಕ್ಷಾ ಬಂಧನ ಆಚರಣೆಯಲ್ಲಿ ಭಾಗವಹಿಸಿದವರಲ್ಲಿ ಕಸ ಗುಡಿಸುವವರು, ಜವಾನರು, ತೋಟಗಾರರು, ಚಾಲಕರು ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡುವ ಇತರರ ಹೆಣ್ಣುಮಕ್ಕಳು ಸೇರಿದ್ದಾರೆ.

Share.
Exit mobile version