ಚಿಕ್ಕಮಗಳೂರು : ದತ್ತಜಯಂತಿ ಅಂಗವಾಗಿ ಬುಧವಾರ ನಗರದಲ್ಲಿ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು, ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಚಿಕ್ಕಮಗಳೂರು ನಗರದ ಎಂಜಿ ರಸ್ತೆ, ಹನುಮಂತಪ್ಪ ಹಿಂದೂ ಶೋಭಾಯಾತ್ರೆ ನಡೆಯುತ್ತಿದ್ದು, ‘ಡಿಜೆ ಸಾಂಗ್’ ಗೆ ಜನರು ಕುಣಿದು ಕುಪ್ಪಳಿಸಿದ್ದಾರೆ. ಯಾವುದೇ ವಯಸ್ಸಿನ ಅಂತರವಿಲ್ಲದೇ ಜನರು ಡಿಜೆ ಸಾಂಗ್ ಗೆ ಕುಣಿದು ಕುಪ್ಪಳಿಸಿದ್ದಾರೆ. ರಸ್ತೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದು, ಫುಟ್ ಬಾತ್ ನಲ್ಲಿ ನಿಲ್ಲುವುದಕ್ಕೆ ಜಾಗ ಇಲ್ಲದಂತಾಗಿದೆ. ಬೃಹತ್ ಶೋಭಾಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದಾರೆ.

ಶೋಭಾಯಾತ್ರೆ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಐಜಿಪಿ ಚಂದ್ರಗುಪ್ತ ಮಂಗಳವಾರ ರಾತ್ರಿ ಚಿಕ್ಕಮಗಳೂರು ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲನೆ ನಡೆಸಿದ್ದರು. ಶೋಭಾಯಾತ್ರೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಹಾವು ತಪ್ಪಿಸಲು ಹೋಗಿ ಸಡನ್ ‘ಬ್ರೇಕ್’ ಹಾಕಿದ ಲಾರಿ ಚಾಲಕ : ಹೆದ್ದಾರಿಯಲ್ಲಿ ಸರಣಿ ಅಪಘಾತ

BREAKING NEWS : ವಿಜಯಪುರಕ್ಕೂ ಕಾಲಿಟ್ಟ ‘ಧರ್ಮ ದಂಗಲ್’ : ‘ಮುಸ್ಲಿಂ ವ್ಯಾಪಾರಿ’ಗಳಿಗೆ ನಿಷೇಧ ಹೇರುವಂತೆ ಮನವಿ

Share.
Exit mobile version