ಸುಭಾಷಿತ :

Sunday, January 26 , 2020 4:19 AM

ನಾವೆಲ್ಲಾ ಡಮ್ಮಿ, ವಿಂಗ್ ಕಮಾಂಡರ್ ಅಭಿನಂದನ್ ರಿಯಲ್ ಹೀರೋ ಅಂದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್


Saturday, March 2nd, 2019 7:33 am


ಮೈಸೂರು: ನಾವೆಲ್ಲಾ ಡಮ್ಮಿ, ವಿಂಗ್ ಕಮಾಂಡರ್ ಅಭಿನಂದನ್ ರಿಯಲ್ ಹೀರೋ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಂದನ್ ಅವರನ್ನು ಹಾಡಿ ಹೊಗಳಿದ್ದಾರೆ.

ಅವರು ಶುಕ್ರವಾರ ಮೈಸೂರಿನಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿರುವ ನಟ ದರ್ಶನ್ ಅವರು ಮಾಧ್ಯಮದೊಂದಿಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ ವಿಂಗ್ ಕಮಾಂಡರ್ ಅಭಿನಂದನ್ ಅವರು ರಿಯಲ್ ಹೀರೋ, ನಾವೆಲ್ಲಾ ಡಮ್ಮಿ. ಇನ್ನೊಬ್ಬರ ನೆಲದಲ್ಲಿ ನಿಂತು ಅಷ್ಟು ಧೈರ್ಯವಾಗಿರುವ ಅವರ ಗಟ್ಸ್ ಗ್ರೇಟ್ ಹಾಗೂ ಅವರಿಗೆ ಹ್ಯಾಟ್ಸಾಫ್ ಹೇಳುತ್ತೇನೆ ಅಂತಹೇಳಿದರು.

ಇನ್ನು ನನಗೆ ಛಾಯಾಚಿತ್ರದ ಬಗ್ಗೆ ಅರಿವೇ ಇರಲಿಲ್ಲ. ನನ್ನ ಸ್ನೇಹಿತರು ಇದರ ಹುಚ್ಚು ಹಿಡಿಸಿದರು. ಬಳಿಕ ನಾನು ಕಬಿನಿ, ಕೇರಳ ಸೇರಿದಂತೆ ಹಲವೆಡೆ ಓಡಾಡಿ ಈ ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಒಂದು ಒಳ್ಳೆಯ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಿದ್ದೇವೆ. ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ತಿಳಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions