ಲಂಡನ್ : ಇಂಗ್ಲೆಂಡ್ ಮಹಿಳಾ ಕ್ರಿಕೆಟಿಗ ಡೇನಿಯಲ್ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಲೆಸ್ಬಿಯನ್ ಆಗಿದ್ದ ಆಕೆ ತನ್ನ ಗೆಳತಿ, ಮಾಜಿ ಕ್ರಿಕೆಟಿಗ ಜಾರ್ಜಿ ಹೆಡ್ಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಇನ್ಸ್ಟಾಗ್ರಾಮ್ ನಲ್ಲಿ ಅವರು ಲಿಪ್ಲಾಕ್ ಮಾಡಿರುವ ಫೋಟೋ ಶೇರ್ ಮಾಡಿದ್ದಾರೆ. “ನನ್ನದು ಎಂದೆಂದಿಗೂ” ಎಂದು ಕ್ರಿಕೆಟಿಗ ಟ್ವಿಟರ್ನಲ್ಲಿ ತನ್ನ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಇದೇ ವೇಳೆ ಅವರ ಫೋಟೋಕ್ಕೆ ಅಭಿಮಾನಿಗಳು ಮತ್ತು ನೆಟಿಜನ್ಗಳು ವ್ಯಾಟ್ ಮತ್ತು ಜಾರ್ಜಿಗೆ ಶುಭ ಹಾರೈಸುತ್ತಿದ್ದಾರೆ. ಅಂಂದ ಹಾಗೇ ಇಬ್ಬರೂ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು ಎನ್ನಲಾಗಿದ್ದು, ಈ ಬಗ್ಗೆ ವ್ಯಾಟ್ 2020 ರಲ್ಲಿ ಈ ಬಗ್ಗೆ ತಿಳಿಸಿದ್ದರು. ವ್ಯಾಟ್ 2023 ರ ಮಹಿಳಾ T20 ವಿಶ್ವಕಪ್ನ ಸೆಮಿಫೈನಲ್ಗೆ ಪ್ರವೇಶಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾಗವಾಗಿದ್ದರು.
Mine forever 😍💍❤️ pic.twitter.com/cal3fyfsEs
— Danielle Wyatt (@Danni_Wyatt) March 2, 2023
Dreamt of playing in the WPL. Heartbroken 💔 Congrats to all who got picked up. India is a wonderful place to play cricket
— Danielle Wyatt (@Danni_Wyatt) February 14, 2023