ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜಗತ್ತಿನಲ್ಲಿ ಅನೇಕ ಅಪರಿಚಿತ ಸ್ಥಳಗಳಿವೆ. ಅಂತಹ ಸ್ಥಳಗಳಿಗೆ ಹೋಗಿ ಅದನ್ನ ಅನುಭವಿಸುವುದು ವಿಭಿನ್ನ ಅನುಭವ. ಪ್ರಯಾಣದ ವಿಷಯಕ್ಕೆ ಬಂದಾಗ, ದೀರ್ಘ ರಸ್ತೆ ಪ್ರವಾಸಕ್ಕಿಂತ ಉತ್ತಮವಾದದ್ದು ಯಾವುದು? ಇತ್ತೀಚೆಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಚಲಿಸುವ ರಸ್ತೆಯನ್ನ ಕಾಣಬಹುದು. ಈ ರಸ್ತೆ ಕಣ್ಣಿಗೆ ಕಾಣುವಂತೆ ತುಂಬಾ ಅಪಾಯಕಾರಿ, ಅದರ ಮೇಲೆ ಹೋದರೆ ಅಷ್ಟೆ. ಅಂದ್ಹಾಗೆ, ಈ ರಸ್ತೆ ಅರ್ಜೆಂಟೀನಾದಲ್ಲಿದೆ. ಈ ರಸ್ತೆಯಲ್ಲಿನ ಪ್ರಯಾಣವು ಯಾವುದೇ ವ್ಯಕ್ತಿಗೆ ಜೀವಮಾನದ ಅನುಭವವಾಗಿದೆ. ರಸ್ತೆ ನಯವಾದ ಮತ್ತು ಅಗಲವಾಗಿದ್ದರೆ, ಅದು ಅದ್ಭುತವಾಗಿದೆ ಅನ್ಸುತ್ತೆ. ಆದ್ರೆ, ಪರ್ವತಗಳಲ್ಲಿ ಅಂಕುಡೊಂಕಾದ ರಸ್ತೆ ಇದ್ದರೆ, ಆಗ ವ್ಯಕ್ತಿಯು ನರಕ ಭಾವನೆ ಅನುಭವಿಸುತ್ತಾನೆ. ಅಂತಹ ಭಯಾನಕ ರಸ್ತೆಯ ಬಗ್ಗೆ ಈಗ ತಿಳಿಯೋಣ.

ಅರ್ಜೆಂಟೀನಾ.. 9 ಜುಲೈ 1816 ರಂದು ಸ್ಪೇನ್‌ನಿಂದ ತನ್ನ ಸ್ವಾತಂತ್ರ್ಯವನ್ನ ಗಳಿಸಿತು ಮತ್ತು ಅಂದಿನಿಂದ ದೊಡ್ಡ ಪ್ರಗತಿಯನ್ನ ಸಾಧಿಸಿದೆ. ಈ ದೇಶದ ಮುಂದುವರಿದ ಇಂಜಿನಿಯರಿಂಗ್ ಬಗ್ಗೆ ಹೇಳಲು ಇಲ್ಲಿರುವ ಒಂದು ಹೆದ್ದಾರಿ ಸಾಕು. ಇದು ನೆಟ್ಟಗರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಚಿಲಿ-ಅರ್ಜೆಂಟೀನಾವನ್ನ ಸಂಪರ್ಕಿಸುವ ಈ ರಸ್ತೆಯನ್ನ ಲಾಸ್ ಕ್ಯಾರಕೋಲ್ಸ್ ಪಾಸ್ ಎಂದು ಕರೆಯಲಾಗುತ್ತದೆ. ಇದು ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆಯಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತದ ಸಾಧ್ಯತೆ ಹೆಚ್ಚುತ್ತದೆ.

25 ಕಿಮೀ ಉದ್ದದ ಅಪಾಯಕಾರಿ ರಸ್ತೆ

ಪರ್ವತಗಳ ನಡುವಿನ ಸುಂದರವಾದ ಅಂಕುಡೊಂಕಾದ ಮಾರ್ಗದಿಂದಾಗಿ ಇದನ್ನು ಹೇರ್ ಪಿನ್ ಬ್ಯಾಂಡ್ಸ್ ಹೆದ್ದಾರಿ ಎಂದೂ ಕರೆಯುತ್ತಾರೆ. 10,419 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ರಸ್ತೆಯು ಹಿಮದಿಂದಾಗಿ ಸುಮಾರು 6 ತಿಂಗಳ ಕಾಲ ಮುಚ್ಚಲ್ಪಟ್ಟಿತ್ತು. ಇಡೀ 25 ಕಿ.ಮೀ.ಗೆ ಎಲ್ಲಿಯೂ ಸುರಕ್ಷತಾ ಬೇಲಿ ಅಳವಡಿಸಿಲ್ಲ. ಚಿಲಿಯ ರಾಜಧಾನಿ ಸ್ಯಾಂಟಿಯಾಗೊ ಮತ್ತು ಅರ್ಜೆಂಟೀನಾದ ಮೆಂಡೋಜಾ ನಡುವಿನ ಮುಖ್ಯ ರಸ್ತೆಯಾಗಿರುವುದರಿಂದ ಪ್ರತಿ ದಿನವೂ ಅಂಕುಡೊಂಕಾದ ರಸ್ತೆಯಲ್ಲಿ ಭಾರಿ ಸಂಖ್ಯೆಯ ವಾಹನಗಳು ಸಂಚರಿಸುತ್ತವೆ.

 

BREAKING: ‘ಪಟಾಕಿ ಫ್ರೀ’ಯಾಗಿ ಕೊಡದಿದ್ದಕ್ಕೆ ಅಂಗಡಿ ಮಾಲೀಕನನ್ನು ಥಳಿಸಿದ ‘ಬಿಜೆಪಿ ಪುರಸಭೆ ಸದಸ್ಯೆ ಪತಿ’

SBI Loan Offers ; SBI ಸೂಪರ್ ಆಫರ್ಸ್.. ಪ್ರತಿ ಲಕ್ಷಕ್ಕೆ ₹1,500 EMI.. ಕಾರು, ಚಿನ್ನ, ವೈಯಕ್ತಿಕ ಸಾಲಗಳಿಗೆ ಅನ್ವಯ

BIGG NEWS : ಶೀಘ್ರದಲ್ಲೇ ಅನಧಿಕೃತ ‘ಟ್ಯೂಷನ್ ಸೆಂಟರ್’ ಗಳ ಮೇಲೆ ದಾಳಿ, ಕ್ರಮ : ಸಾರ್ವಜನಿಕ ಶಿಕ್ಷಣ ಇಲಾಖೆ

Share.
Exit mobile version