ಸುಭಾಷಿತ :

Wednesday, January 29 , 2020 9:38 PM

ಡಿ. 1 ಕ್ಕೆ ಶಿವಮೊಗ್ಗ ಜೈಲಿಗೆ ತಮಿಳಿನ ‘ಸೂಪರ್ ಸ್ಟಾರ್’ ದಳಪತಿ ವಿಜಯ್…!


Friday, November 29th, 2019 7:14 pm

ಸಿನಿಮಾ ಡೆಸ್ಕ್ : ಬಿಗಿಲ್ ಸಿನಿಮಾದ ಬಿಗ್ ಸಕ್ಸಸ್ ಬಳಿಕ ವಿಜಯ್ ಅಭಿನಯಿಸಿರುವ ಮತ್ತೊಂದು ಹೈ ಬೆಜಟ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಸದ್ಯ ಮತ್ತೊಂದು ಶೆಡ್ಯೂಲ್ ಗಾಗಿ ಶಿವಮೊಗ್ಗ ಕಾರಾಗೃಹಕ್ಕೆ ಎಂಟ್ರಿ ಕೊಡುತ್ತಿದೆ.

ಯೆಸ್, ವಿಜಯ್ ಅವರ ಮುಂದಿನ ಸಿನಿಮಾ ದಳಪತಿ 64 ಸಿನಿಮಾದ ಶೂಟಿಂಗ್ ಗಾಗಿ ಡಿ. 1 ರಂದು ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿಯೇ ಇದೊಂದು ವಿಶೇಷ ಕಾರಾಗೃಹವಾಗಿದ್ದು, ಈ ಹಿಂದೆ ಶಿವರಾಜ್ ಕುಮಾರ್ ಅಭಿನಯದ ವಿಲನ್ ಸಿನಿಮಾದ  ಶೂಟಿಂಗ್ ಕೂಡ ಇಲ್ಲಿ ನಡೆದಿತ್ತು,

ಸದ್ಯ ವಿಜಯ್ ಅವರ ದಳಪತಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊದಲ ಹಂತದ ಶೂಟಿಂಗ್ ದೆಹಲಿಯಲ್ಲಿ ಮುಗಿಸಿ ವಿಜಯ್ ಅಂಡ್ ಟೀಮ್ ಈಗ ಶಿವಮೊಗ್ಗದ ಕಡೆ ಹೊರಟಿದೆ. ಶಿವಮೊಗ್ಗದ ಜೈಲಿನ ಸುತ್ತಾಮುತ್ತಾ ದಳಪತಿ ಶೂಟಿಂಗ್ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯ ಕೂಡ ಪಡೆದುಕೊಂಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions