ಸುಭಾಷಿತ :

Tuesday, April 7 , 2020 6:09 PM

ರುಚಿಯಾದ ಮಿಕ್ಸ್ ವೆಜ್ ಕಟ್ಲೇಟ್


Monday, February 17th, 2020 11:20 am


ಸ್ಪೆಷಲ್ ಡೆಸ್ಕ್ : ಮನೆಯಲ್ಲಿಯೇ ರುಚಿಯಾದ ಬಾಯಲ್ಲಿ ನೀರೂರಿಸುವ ಕಟ್ಲೇಟ್ ನೀವೂ ಮಾಡಬಹುದು. ಹೇಗೆ ಅಂತೀರಾ? ತುಂಬಾನೇ ಸುಲಭ. ನಿಮ್ಮ ಬಳಿ ಒಂದಿಷ್ಟು ತರಕಾರಿ ಇದ್ದರೆ ಸಾಕು. ಇಲ್ಲಿದೆ ನೋಡಿ ಕಟ್ಲೇಟ್ ಮಾಡುವ ಸಿಂಪಲ್ ವಿಧಾನ..

ಬೇಕಾಗುವ ಸಾಮಗ್ರಿಗಳು :
ಆಲೂಗೆಡ್ಡೆ 4-5, 1 ಚಮಚ ಜೀರಿಗೆ, ಅರ್ಧ ಕಪ್ ಜೋಳದ ಹಿಟ್ಟು, ಅಮೆಚ್ಯೂರ್ ಅರ್ಧ ಚಮಚ, ಕೊತ್ತಂಬರಿ ಪುಡಿ ಅರ್ಧ ಚಮಚ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಚಿಟಿಕೆ ಕರಿಮೆಣಸಿನ ಪುಡಿ, 1/4 ಕಪ್ ಕ್ಯಾರೆಟ್,1/4 ಕಪ್ ಬಟಾಣಿ, ಬೀನ್ಸ್ ಕಾಲು ಕಪ್, ಎಣ್ಣೆ,ರುಚಿಗೆ ತಕ್ಕ ಉಪ್ಪು.

ತಯಾರಿಸುವ ವಿಧಾನ :
ಆಲೂಗೆಡ್ಡೆಯನ್ನು ಬೇಯಿಸಿ, ಅದರ ಸಿಪ್ಪೆ ಸುಲಿದು ಒಂದು ಪಾತ್ರೆಯನ್ನು ಚೆನ್ನಾಗಿ ಹಿಸುಕಬೇಕು.
ನಂತರ ಉಳಿದ ತರಕಾರಿಗಳಾದ ಬಟಾಣಿ, ಕ್ಯಾರೆಟ್, ಬೀನ್ಸ್ ಇವುಗಳನ್ನು ಬೇಯಿಸಿ ಹಾಕಿ.
ಇದಕ್ಕೆ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಎಲ್ಲಾ ತರಕಾರಿಗಳನ್ನು ಚೆನ್ನಾಗಿ ಹಿಸುಕಿ ಮಿಕ್ಸ್ ಮಾಡಿ.
ನಂತರ ಅದಕ್ಕೆ ಜೋಳದ ಹಿಟ್ಟು ಹಾಕಿ, ಅಮೆಚ್ಯೂರ್ ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು
ಎಲ್ಲಾ ಮಿಕ್ಸ್ ಮಾಡಿದ ನಂತರ ಆ ಮಿಶ್ರಣವನ್ನು ನಿಮಗೆ ಬೇಕಾದ ಶೇಪ್ ಮಾಡಿ.
ನಂತರ ಅದನ್ನು ಬ್ರೆಡ್ ಕ್ರಂಬ್ಸ್ ನಲ್ಲಿ ಅದ್ದಿ, ಕಾವಲಿ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ.
ಎರಡೂ ಬದಿ ಕಂದು ಬಣ್ಣ ಬರುವವರೆಗೆ ಹುರಿದರೆ ಟಿಕ್ಕಿ ರುಚಿಯಾದ ಮಿಕ್ಸ್ ವೆಜ್ ಕಟ್ಲೇಟ್ ಸವಿಯಲು ರೆಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions