ಸುಭಾಷಿತ :

Wednesday, January 29 , 2020 9:38 PM

‘ಬೀಫ್’ ಟ್ವೀಟ್ ಮಾಡಿ ಸಚಿವರ ಎಡವಟ್ಟು : ನೆಟ್ಟಿಗರಿಂದ ಸಿ.ಟಿ ರವಿಗೆ ಕ್ಲಾಸ್…!


Thursday, January 16th, 2020 8:54 pm

ಬೆಂಗಳೂರು : ಸಚಿವ ಸಿಟಿ ರವಿ ಮಾಡಿದ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ, ಹೌದು, ಕೇರಳ ಪ್ರವಾಸೋದ್ಯಮ ಇಲಾಖೆ ಟ್ವೀಟ್‌ ಮಾಡಿದ್ದ ಬೀಫ್ ಖಾದ್ಯದ ಫೋಟೋವನ್ನು ರೀ ಟ್ವೀಟ್‌ ಮಾಡಿದ ಸಚಿವ ಸಿಟಿ ರವಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಗುರುವಾರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕೇರಳದ ಪ್ರವಾಸೋದ್ಯಮ ಇಲಾಖೆ ಹಾಕಿದ್ದ ಟ್ವೀಟ್‌ನ್ನು ಹಂಚಿಕೊಂಡ ಸಚಿವ ಸಿ ಟಿ ರವಿ ‘ಕರ್ನಾಟಕಕ್ಕೆ ಸ್ವಾಗತ’ ಎಂದು ‘ಒನ್ ಸ್ಟೇಟ್ ಮೆನೀ ವರ್ಡ್ಸ್’ ಎಂಬ ಹ್ಯಾಶ್ ಟ್ಯಾಗ್ ನೀಡಿದ್ದರು. ಸಚಿವರು ಮಾಡಿದ ಈ ಟ್ವೀಟ್ ನಿಂದ ಗೊಂದಲಕ್ಕೊಳಗಾದ ನೆಟ್ಟಿಗರು ಸಿಟಿ ರವಿ ಟ್ವೀಟ್ ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಕೆಲವು ದಿನ ಈ ಬಗ್ಗೆ ಚರ್ಚೆ ನಡೆದರೂ ಕೂಡ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಈಗ ಈ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಕೇರಳದ ಪ್ರವಾಸೋದ್ಯಮದ ಟ್ವೀಟ್‌ನ್ನು ಹಂಚಿಕೊಂಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೀರಿ. ನಾನು ಬೀಫ್‌ ಅನ್ನು ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸಿದಿರಿ, ಇದು ನನ್ನ ನಂಬಿಕೆಗೆ ವಿರುದ್ಧವಾಗಿದೆ.ನನ್ನ ಟ್ವೀಟ್ ಕೇರಳದ ವಿರುದ್ಧ ವ್ಯಂಗ್ಯ ಹಾಗೂ ಮೌನ ಪ್ರತಿಭಟನೆಯಾಗಿದೆ” ಮರು ಟ್ವೀಟ್ ಮಾಡುವ ಮೂಲಕ ಸಿಟಿ ರವಿ ಸ್ಪಷ್ಟನೆ ನೀಡಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions