ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೊನೆಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಮಹತ್ವದ ಯೋಜನೆಗಳಿಗೆ ಅನುಮೋದನೆಯನ್ನು ನೀಡಲಾಗಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆಯ ಬಳಿಕ ಸ್ವತಹ ಸಂಪುಟ ನಿರ್ಣಯಗಳನ್ನು ಸುದ್ದಿಗೋಷ್ಠಿ ನಡೆಸಿ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿ, ಸಮುದಾಯಗಳ ಆಶೋತ್ತರಗಳು ಹೆಚ್ಚಿವೆ. ಎಸ್ಸಿ,ಎಸ್ಟಿ ರಿಸರ್ವೇಶನ್ ಹೆಚ್ಚಳ ಮಾಡಿದ್ದೇವೆ. ಅಸೆಂಬ್ಲಿಯಲ್ಲಿ ಕಾನೂನು ಮಾಡಿದ್ದೇವೆ. ಈಗ ಆ ಹೆಚ್ಚಳ ಅನುಷ್ಠಾನದಲ್ಲಿದೆ. 9 ಶೆಡ್ಯೂಲ್ ಗೆ ನಾವು ಕಳಿಸಿದ್ದೇವೆ ಎಂದರು.
ಎಸ್ಸಿಯೊಳಗೆ 101 ಕ್ಯಾಸ್ಟ್ ಗಳಿವೆ. ಟಚಬಲ್, ಅನ್ ಟಚ್ಚಬಲ್ ನಾವು ನೋಡಿದ್ದೇವೆ. ಇತ್ತೀಚೆಗೆ ಅನ್ ಟಚ್ಚಬಲ್ ಸೇರಿದ್ದಾರೆ. ಬಂಜಾರ, ಕೊರಮ, ಕೊರಚ ಟಚ್ಚಬಲ್ ಕಮ್ಯುನಿಟಿಯಾಗಿದೆ. ಇವರಿಗೆ ನಮ್ಮನ್ನ ತೆಗೆಯುತ್ತಾರೆಂಬ ಆತಂಕವಿತ್ತು. ಬೋವಿ, ಲಂಬಾಣಿ, ಕೊರಚ ಒರಿಜಿನಲ್ ಶೆಡ್ಯೂಲ್ ಕಾಸ್ಟ್ ಆಗಿತ್ತು. ಇದು ಮಹಾರಾಜರ ಕಾಲದಲ್ಲಿತ್ತು. ಸ್ವಾತಂತ್ರ್ಯ ಬಂದ ನಂತರ ಅವರು ಅಲ್ಲೇ ಇದ್ದಾರೆ. ಎಸ್ಸಿ ಪಟ್ಟಿಯಲ್ಲೇ ಅವರಿದ್ದಾರೆ. ಕೇಂದ್ರಕ್ಕೆ ನಾವು ಅದನ್ನ ಶಿಫಾರಸು ಮಾಡಿದ್ದೇವೆ. ಒಳ ಮೀಸಲಾತಿಯಲ್ಲಿಭಿನ್ನಾಬಿಪ್ರಾಯಗಳು ಇದ್ವು. ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೆವು. ಎಸ್ಸಿಯಲ್ಲಿ ಈಗ ಎಲ್ಲರಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗಬೇಕಾದರೆ 3412೨ ಅನ್ವಯ ಆಗಬೇಕು ಎಂದರು.
ನಾಲ್ಕು ಗುಂಪುಗಳಲ್ಲಿ ವರ್ಗೀಕರಣ ಮಾಡಲಾಗಿತ್ತು. ದಲಿತ ಎಡ,ದಲಿತ ಬಲ, ಟಚ್ಚಬಲ್, ಅದರ್ಸ್ ಇವೆ. ಎಡಕ್ಕೆ 6% ಮೀಸಲು, ಬಲಗೈಗೆ 5.5, ಟಚ್ಚಬಲ್ ಗೆ 4.5, ಇತರರಿಗೆ ಶಿಫಾರಸ್ ಇತ್ತು. ಇದನ್ನ ನಮ್ಮ ಸಂಪುಟ ಇದನ್ನ ಒಪ್ಪಿಕೊಂಡಿದೆ ಎಂದರು.
ಹಿಂದುಳಿದ ವರ್ಗಗಳಲ್ಲಿ ಪ್ರವರ್ಗ-1 ರಲ್ಲಿ 4% ಇದೆ. ಪ್ರವರ್ಗ- 2ಎ ನಲ್ಲಿ 15%ಮೀಸಲಾತಿ ಇದೆ. ರಿಲಿಜಿಯಸ್ ಮೈನಾರಿಟಿ 4% ಮೀಸಲಾತಿ ಇದೆ. ಒಕ್ಕಲಿಗರಿಗೆ 4% ಪರ್ಸೆಂಟ್ ಮೀಸಲಾತಿ ಇದೆ. ಲಿಂಗಾಯತರಿಗೆ 5% ಮೀಸಲಾತಿ ಇದೆ. ಈ ಒಬಿಸಿ ಲೀಸ್ಟ್ ಪ್ರತಿ 10 ವರ್ಷಕ್ಕೆ ಪರಾಮರ್ಶೆ ಆಗಬೇಕು. ಈಗಿನ ಒಬಿಸಿ ಕಮೀಷನ್ ಪರಾಮರ್ಶಿಸಿದೆ. ಜಯಪ್ರಕಾಶ್ ಹೆಗ್ಡೆ ಕಮೀಷನ್ ಪರಾಮರ್ಶಿಸಿದೆ ಎಂದರು.
ರಾಜ್ಯವನ್ನ ಸುತ್ತಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಕರ್ನಾಟಕದಲ್ಲಿ ಮೂರು ಕೆಟಗರಿ ಇದೆ. ಈ ಮೂರು ಕೆಟಗರಿ ಅವಶ್ಯಕತೆ ಇಲ್ಲ ಎಂದಿದೆ. ಎರಡೇ ಕ್ಯಾಟಗರಿ ಮಾಡೋಕೆ ಶಿಫಾರಸು ಕೊಟ್ಟಿದೆ. 3ಎ, 3ಬಿ ಇತ್ತು ಇದಕ್ಕೆ 2ಸಿ, 2ಡಿ ಮಾಡಿದ್ದೇವೆ. ಬೆಳಗಾವಿ ಸದನದಲ್ಲಿ ನಾವು ಮಾಡಿದ್ದೇವೆ. ಮೀಸಲಾತಿ ಹೆಚ್ಚಳಕ್ಕೆ ಇವರು ಒತ್ತಾಯಿಸಿದ್ದರು ಎಂದರು.
ಕೆಲವರ್ಗಗಳಲ್ಲಿನ ಮೀಸಲಾತಿ ಎತ್ತಬಹುದು. 3ಎ, 3ಬಿ ಯನ್ನ 2ಸಿ, 2ಡಿ ಮಾಡಿದ್ದೇವೆ. ರಿಲಿಜಿಯಸ್ ಮೈನಾರಿಟಿ ತೊಂದರೆ ಆಗಬಾರದು. ಆ ರೀತಿಯಲ್ಲಿ ನಾವು ಮೀಸಲಾತಿ ಪರಿಷ್ಕರಿಸಿದ್ದೇವೆ. EWSಗೆ ಕೆಲ ಹಿಂದುಳಿದ ವರ್ಗ ಹಾಕಿದ್ದೇವೆ. ಅಲ್ಲಿನ ಮೀಸಲಾತಿಯನ್ನ 2ಸಿ, 2ಡಿಗೆ ಹಂಚಿದ್ದೇವೆ. ಪಿಂಜಾರ, ದರೋಜಿ ಬೇರೆ 2ಎನಲ್ಲಿ ಇದ್ದಾರೆ. ಅವನ್ನೂ ನಾವು ಡಿಸ್ಟರ್ಬ್ ಮಾಡ್ತಿಲ್ಲ ಎಂದರು.
2ಬಿ ಯಲ್ಲಿದ್ದವರನ್ನ ನಾವು EWSಗೆ ಹಾಕಿದ್ದೇವೆ. ಒಕ್ಕಲಿಗರಿಗೆ 4 ರಜೊತೆಗೆ 2% ಸೇರಿಸಲಾಗಿದೆ. ಲಿಂಗಾಯತರಿಗೆ 5% ಗೆ 2 ಸೇರಿಸಲಾಗಿದೆ. ಒಟ್ಟು ಒಕ್ಕಲಿಗರಿಗೆ %,ಲಿಂಗಾಯತರಿಗೆ 7% ಆಗಲಿದೆ ಎಂದರು.
ಕೋಳಿ ಸಮುದಾಯದ ಶಿಫಾರಸು ಪೆಂಡಿಗ್ ಇದೆ. ಮುಸ್ಲಿಂ ಪ್ರವರ್ಗದಿಂದ 2% ತೆಗೆಯಲಾಗಿದೆ. ಮುಸ್ಲಿಂರಿಗೆ 10% ಮೀಸಲಾತಿ ಸಿಗಲಿದೆ. 2ಎ ನಲ್ಲಿ ನಾವು ಟಚ್ ಮಾಡಿಲ್ಲ. 2ಬಿ ಯಲ್ಲಿ ನಾವು ಲಿಂಗಾಯತರನ್ನ ಹಾಕಿದ್ದೇವೆ. ಬೇಡ ಜಂಗಮ ಮೀಸಲಾತಿ ಹೋರಾಟ ವಿಚಾರವಾಗಿ ಅಧಿಕಾರಿಗಳ ಸಮಿತಿಯನ್ನ ರಚಿಸಿದ್ದೇವೆ. ಆ ಸಮಿತಿ ವರದಿ ಕೊಟ್ಟ ನಂತರ ನಿರ್ಧರಿಸುತ್ತೇವೆ ಎಂದು ಹೇಳಿದರು.
ವರದಿ: ವಸಂತ ಬಿ ಈಶ್ವರಗೆರೆ
ಬಳ್ಳಾರಿಯ ಈ ಗ್ರಾಮೀಣ ಪ್ರದೇಶಗಳಲ್ಲಿ ಮಾ.27 ರಂದು ವಿದ್ಯುತ್ ವ್ಯತ್ಯಯ |Power Cut