ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ತನ್ನಲ್ಲಿ ಖಾಲಿಯಿರುವ ಪೊಲೀಸ್ ಪೇದೆ(Constable) ಉದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 9212 ಹುದ್ದೆಗಳ ಭರ್ತಿ ಮುಂದಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25-04-2023
ಹುದ್ದೆಯ ಹೆಸರು ಮತ್ತು ಹುದ್ದೆಯ ಸಂಖ್ಯೆ
ಕೇಂದ್ರ ಮೀಸಲು ಪೊಲೀಸ್ ಪಡೆ ಖಾಲಿ ಇರುವ ತಾಂತ್ರಿಕ / ವ್ಯಾಪಾರಿ 9212 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದರಲ್ಲಿ ಮಹಿಳೆಯರಿಗೆ 107 ಪೋಸ್ಟ್ ಗಳನ್ನು ಮೀಸಲಿಡಲಾಗಿದ್ದು, ಪುರುಷರಿಗೆ 9105 ಹುದ್ದೆಗಳನ್ನು ಮೀಸಲಿಡಲಾಗಿದೆ.
ವಿದ್ಯಾರ್ಹತೆ
ಶೈಕ್ಷಣಿಕ ಅರ್ಹತೆ- ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಚಿವಾಲಯದಿಂದ ಪದವಿ ಪಡೆದಿರಬೇಕು.
ತಾಂತ್ರಿಕ ಅರ್ಹತೆ- ಹೆವಿ ಟ್ರಾನ್ಸ್‌ಪೋರ್ಟ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ನೇಮಕಾತಿ ಸಮಯದಲ್ಲಿ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 27 ವರ್ಷಗಳು
ಅಭ್ಯರ್ಥಿಗಳು 02/08/1996 ಕ್ಕಿಂತ ಮೊದಲು ಮತ್ತು 01/08/2002 ಕ್ಕಿಂತ ನಂತರ ಜನಿಸಬಾರದು.
ವೇತನ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 20 ಸಾವಿರದಿಂದ 46 ಸಾವಿರದವೆರೆಗೆ ವೇತನ ಲಭ್ಯವಾಗಲಿದೆ.
ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ/EWS – 100/-
ಎಸ್ಸಿ/ಎಸ್ಟಿ/ಮಹಿಳೆ/ಮಾಜಿ ಸೈನಿಕರು – ವಿನಾಯಿತಿ
ಕೇಂದ್ರ ಮೀಸಲು ಪೊಲೀಸ್ ಪಡೆ ಹುದ್ದೆಗಳ ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
BREAKING NEWS: ಬೆಂಗಳೂರಿನಲ್ಲಿ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇರಿದಿದ ವ್ಯಕ್ತಿಯ ಬಂಧನ
JOB ALERT : ‘ಕರ್ನಾಟಕ ಹೈಕೋರ್ಟ್’ ನಲ್ಲಿ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಏಪ್ರಿಲ್ 6 ಕೊನೆಯ ದಿನಾಂಕ
ಬಳ್ಳಾರಿಯ ಈ ಗ್ರಾಮೀಣ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ |Power Cut