ಭಿಂಡ್ (ಮಧ್ಯಪ್ರದೇಶ) : ಮಳೆಯ ಪ್ರವಾಹದಿಂದಾಗಿ ಸ್ಮಶಾನ ಜಲಾವೃತವಾದ ಪರಿಣಾಮ 70 ವರ್ಷದ ಮಹಿಳೆಯೊಬ್ಬರ ಮೃತದೇಹಕ್ಕೆ ರಸ್ತೆ ಬದಿಯಲ್ಲೇ ಅಂತ್ಯಸಂಸ್ಕಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಅಜ್ನೌಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿನ ಶವಸಂಸ್ಕಾರದ ಸ್ಥಳವು ಸಿಂಧ್ ನದಿಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಹೀಗಾಗಿ ಬೇರೆ ಸ್ಥಳದ ಲಭ್ಯತೆ ಇಲ್ಲದ್ದರಿಂದ ರಸ್ತೆ ಬದಿಯಲ್ಲೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಮೃತ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ.

ಭಿಂಡ್ ಜಿಲ್ಲೆಯಲ್ಲಿರುವ ಅಜ್ನೌಲ್ ಗ್ರಾಮದಲ್ಲಿ ಯಾವುದೇ ಪರ್ಯಾಯ ಸ್ಮಶಾನ ಸೌಲಭ್ಯ ಇಲ್ಲದಿರುವುದರಿಂದ ಅಲ್ಲಿನ ಜನರು ಶವ ಸಂಸ್ಕಾರಕ್ಕಾಗಿ ಪರದಾಡುವಂತಾಗಿದೆ. ಈ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಿಂಧ್ ನದಿಯು ಉಕ್ಕಿ ಹರಿಯುತ್ತಿದ್ದು, ಗ್ರಾಮದಲ್ಲಿ ಸ್ಮಶಾನ ಜಲಾವೃತಗೊಂಡಿದೆ.

BIGG NEWS : ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು `ಇ-ಕೆವೈಸಿ’ ಮಾಡಲು ಜುಲೈ 31 ಕೊನೆಯ ದಿನ

BIGG NEWS : `CET’ ಫಲಿತಾಂಶದ ಕುರಿತಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ

Commonwealth Games 2022: ʻಕಾಮನ್‌ವೆಲ್ತ್ ಗೇಮ್ಸ್ʼನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ…

 

Share.
Exit mobile version