ಬೆಂಗಳೂರು: ಇತ್ತೀಚೆಗೆ ರವಿಚಂದ್ರ ಮಗಳ ಮದುವೆ ಅದ್ದೂರಿಯಾಗಿ ಮಾಡಿ ಆರಾಮ್ ಆಗಿ ಇದ್ದರು. ಇದೀಗ ಮತ್ತೆ ಅವರ ಮನೆಯಲ್ಲಿ ಮಂಗಳವಾದ್ಯ ಮೊಳಗಲಿದೆ. ಅಂದರೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಹಿರಿಯ ಮಗ ಮನೋರಂಜನ್ ಮದುವೆಗೆ ರೆಡಿಯಾಗಿದ್ದಾರೆ.
BIGG NEWS: ಮಹಿಳೆಯನ್ನು ಥಳಿಸಿದ್ದಕ್ಕೆ ಡಿಎಂಕೆ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಅಣ್ಣಾಮಲೈ ಆಗ್ರಹ
ಹೌದು ಅವರ ಮದುವೆ ಅಗಸ್ಟ್ 21 ಹಾಗೂ 22 ರಂದು ಬೆಂಗಳೂರಿನಲ್ಲೇ ಮನೋರಂಜನ್ ಸಪ್ತಪದಿ ತುಳಿಯಲಿದ್ದಾರೆ. ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಹುಡುಗಿಯನ್ನು ಮನೋರಂಜನ್ ಕೈ ಹಿಡಿಯಲಿದ್ದಾರೆ.
BIGG NEWS: ಮಹಿಳೆಯನ್ನು ಥಳಿಸಿದ್ದಕ್ಕೆ ಡಿಎಂಕೆ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಅಣ್ಣಾಮಲೈ ಆಗ್ರಹ
ಇದನ್ನು ರವಿಚಂದ್ರನ್ ಅವರೇ ಹುಡುಗಿಯನ್ನು ಹುಡುಕಿದ್ದಾರಂತೆ . ಅವರು ಸಹ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿ ಆಗಿದ್ದಾರೆ. ರವಿಚಂದ್ರನ್ ಕುಟುಂಬದಲ್ಲಿ ಸದ್ದಿಲ್ಲದೇ ಮದುವೆ ಸಿದ್ಧತೆಗಳು ನಡೆದಿದ್ದು, ಕೆಲವೇ ದಿನಗಳಲ್ಲೇ ದಕ್ಷಿಣ ಭಾರತದ ಅನೇಕ ಗಣ್ಯರಿಗೆ ಮದುವೆ ಆಮಂತ್ರಣ ನೀಡಲಿದ್ದಾರಂತೆ .