ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಸಿಡಿದು 78 ಮಂದಿಗೆ ಗಾಯಗಳಾದ ಘಟನೆ ವರದಿಯಾಗಿದೆ ಮಂಗಳವಾರ ಪಟಾಕಿ ಸಿಡಿತದಿಂದ ನಗರದಲ್ಲಿ 78 ಮಂದಿ ಕಣ್ಣಿಗೆ ಹಾನಿಯಾಗಿವೆ, ಈ ಪೈಕಿ 10 ಮಂದಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು, ಐದು ಜನರ ದೃಷ್ಟಿಮರಳುವ ಸಾಧ್ಯತೆ ಕಡಿಮೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಿಂಟೋ ಕಣ್ಣಿನ ಆಸ್ಪತ್ರೆ – 17 ಪ್ರಕರಣ, ನಾರಾಯಣ ನೇತ್ರಾಲಯ – 23 ಪ್ರಕರಣ, ನೇತ್ರಧಾಮ – 20 ಪ್ರಕರಣ, ಶಂಕರ ಕಣ್ಣಿನ ಆಸ್ಪತ್ರೆ – 13, ಆಸ್ಟರ್ ಸಿಎಂಐ – 3,ಮೋದಿಕಣ್ಣಿನ ಆಸ್ಪತ್ರೆ – 1, ವಿಕ್ಟೋರಿಯಾ ಸುಟ್ಟಗಾಯ ಆಸ್ಪತ್ರೆ – 1, ಸೇರಿ ಒಟ್ಟು 78 ಪ್ರಕರಣಗಳು ದಾಖಲಾಗಿದೆ.

ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ ಒಂದೇ ದಿನ 18 ಮಂದಿ ಪಟಾಕಿ ಸಿಡಿತದಿಂದ ಕಣ್ಣುಗಳಿಗೆ ಹಾನಿಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಆರು ಮಂದಿ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದು,. ಮೂವರ ಕಣ್ಣುಗಳ ಕಾರ್ನಿಯಾ ಭಾಗಕ್ಕೆ ಸಾಕಷ್ಟುಹಾನಿಯಾಗಿದ್ದು, ದೃಷ್ಟಿಮರಳುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ.

ಚಾಮರಾಜಪೇಟೆ ಬಳಿಯ ಅಜಾದ್ ನಗರದಲ್ಲಿ ಭುವನ್, ಎನ್ ಜಿ ಎಫ್ ಲೇಔಟ್ ನಲ್ಲಿ ಸುರಭಿ, ಜೆಜೆ ಆರ್ ನಗರದಲ್ಲಿ ಕಾರ್ತಿಕ್, ಸರ್ಜಾಪುರ ರಸ್ತೆಯಲ್ಲಿ ಸಂಗೀತಾ ವರ್ಮ, ಮೈಸೂರು ರಸ್ತೆಯಲ್ಲಿ ಜಯಸೂರ್ಯ ಎಂಬ ಯುವಕ,ಅನ್ನಪೂರ್ಣೇಶ್ವರಿ ನಗರದಲ್ಲಿ ಮಮತಾ ಎಂಬ ಮಹಿಳೆಗೆ ಗಾಯಗಳಾಗಿದೆ. ಈ ಪೈಕಿ ಬಹುತೇಕರ ಕಣ್ಣಿಗೆ ಗಾಯಗಳಾಗಿದ್ದು, ಹಲವರ ಮುಖಕ್ಕೆ ಸುಟ್ಟ ಗಾಯಗಳಾಗಿದೆ. ಹಲವರು ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿದ್ದಾರೆ. ಒಟ್ಟಿನಲ್ಲಿ ಪಟಾಕಿ ಸಿಡಿಸಲು ಹೋಗುವ ಯುವಕರು, ಮಕ್ಕಳು ಎಚ್ಚರಿಕೆಯಿಂದಿರುವುದು ಒಳಿತು.

BIGG NEWS : ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘ಶಿಷ್ಯ ವೇತನ’ಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

BIGG NEWS : ಅಲ್ಪಸಂಖ್ಯಾತ ಸಮುದಾಯದವರಿಗೆ ಗುಡ್ ನ್ಯೂಸ್ : ವ್ಯಾಪಾರ, ಉದ್ದಿಮೆಗಾಗಿ ನೇರ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Share.
Exit mobile version