ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಏರಿಕೆ ಪ್ರಕರಣಗಳ ( Corona Virus Case ) ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 299 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂದು ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 6 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿತ್ರದುರ್ಗ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿರೋದಾಗಿ ತಿಳಿಸಿದೆ.
ವಿಜಯಪುರ 02, ಉತ್ತರ ಕನ್ನಡ 05, ಉಡುಪಿ 03, ತುಮಕೂರು ಮತ್ತು ಶಿವಮೊಗ್ಗ 04, ಮೈಸೂರು 11, ಮಂಡ್ಯ ಮತ್ತು ಕೋಲಾರ 02, ಕೊಡಗು 12, ಕಲಬುರ್ಗಿ ಮತ್ತು ಚಿಕ್ಕಬಳ್ಳಾಪುರ 01, ಹಾಸನ ಮತ್ತು ಧಾರವಾಢ 06, ದಕ್ಷಿಣ ಕನ್ನಡ 14 ಕೇಸ್ ಪತ್ತೆಯಾಗಿವೆ.
ಚಿಕ್ಕಮಗಳೂರು 04, ಬೆಂಗಳೂರು ನಗರ 215, ಬೆಂಗಳೂರು ಗ್ರಾಮಾಂತರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 03, ಬೆಳಗಾವಿಯಲ್ಲಿ 01 ಸೇರಿದಂತೆ 299 ಜನರಿಗೆ ಕೊರೋನಾ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 29,98,699ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 260 ಸೇರಿದಂತೆ ಇದುವರೆಗೆ 29,53,327 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 7,100 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಮೈಸೂರು, ಧಾರವಾಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು, ಬೆಂಗಳೂರು ನಗರದಲ್ಲಿ ಮೂವರು ಸೇರಿದಂತೆ ಆರು ಸೋಂಕಿತರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 38,243ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.
Vatal Nagaraj: ಕೊರೋನಾ ಹೆಚ್ಚಾಗುತ್ತಿರೋದ್ರಿಂದ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಿಸಿ – ವಾಟಾಳ್ ನಾಗರಾಜ್ ಆಗ್ರಹ