ಬೆಂಗಳೂರು : ಡೆಡ್ಲಿ ಕೋರೊನಾ ಸೋಂಕಿ ಹೆಚ್ಚಳ ಬೆನ್ನಲ್ಲೆ ಸಿಲಿಕಾನ್ ಸಿಟಿ ಬೆಂಗಳೂರಿಗೆ “ಕೋವಿಡ್ ಆತಂಕಕಾರಿ ಮಟ್ಟದಲ್ಲಿಲ್ಲ” ಎಂದು ಇನ್ಫೆಕ್ಸ್ ಡಿಸಿಸ್ ರಿಸರ್ಚ್ ಫೌಂಡೇಶನ್ ಸಿಇಒ ರೋಹನ ಪೈಸ್ ಸ್ಪಷ್ಟನೆ ನೀಡಿದ್ದಾರೆ.
ಹೊರ ದೇಶಗಳಲ್ಲಿ ಕೊರೊನಾ ಭೀತಿ ಹೆಚ್ಚಳಗೊಂಡ ಸಮಯದಲ್ಲಿ ಸಮೂಹ ಮಟ್ಟದಲ್ಲಿ ಕೊರೊನಾ ಭೀತಿಯ ಪ್ರಮಾಣವನ್ನು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ತಪಾಸಣೆಯ ಭಾಗವಾಗಿ ಬೆಂಗಳೂರಿನಲ್ಲಿ ಒಳಚರಂಡಿ ನೀರಿನಲ್ಲಿ ಸೂಕ್ಷ್ಮಜೀವಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ.
ಈ ಒಳಚರಂಡಿ ತಪಾಸಣಾ ವರದಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಡಿಸೆಂಬರ್ಗಿಂತಲೂ ಜನವರಿಯಲ್ಲಿ ‘ಸಿಟಿ ವ್ಯಾಲ್ಯೂ’ ಶೇ 25ಕ್ಕಿಂತ ಕಡಿಮೆ ಇದೆ. ಮಾದರಿಗಳ ಸಿಟಿ ವ್ಯಾಲ್ಯೂ ಶೇ 25ಕ್ಕಿಂತ ಹೆಚ್ಚಿದ್ದರೇ ಅದನ್ನು ಸಾಮಾನ್ಯವಾಗಿದೆ ಪರಿಣಗಿಸಲಾಗುತ್ತದೆ. ಇವುಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸುವುದು ಅವಶ್ಯಕ ಇರುವುದಿಲ್ಲ ಎಂದು ಇನ್ಫೆಕ್ಸ್ ಡಿಸಿಸ್ ರಿಸರ್ಚ್ ಫೌಂಡೇಶನ್ ಸಿಇಒ ರೋಹನ ಪೈಸ್ ಸ್ಪಷ್ಟನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಹೆಮ್ಮಾರಿ ಕೊರೊನಾ ಸೋಂಕಿನ ತೀವ್ರತೆ ಆತಂಕಕಾರಿ ಮಟ್ಟದಲ್ಲಿಲ್ಲ ಎಂದು ತಿಳಿದುಬಂದಿದ್ದು. ಆತಂಕದಿಂದ ಜನರು ನಿಟ್ಟುಸಿರು ಬಿಟ್ಟದಂತಾಗಿದೆ