ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡಿದೆ. ಈ ಹಿಂದೆ 1 ಸಾವಿರದ ಒಳಗೆ ಪತ್ತೆಯಾಗುತ್ತಿದ್ದಂತ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 1 ಸಾವಿರ ಗಡಿದಾಟಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು, ರಾಜ್ಯದಲ್ಲಿ ಇಂದು ಹೊಸದಾಗಿ 1,249 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
BDAಯಿಂದ ಬನಶಂಕರಿ 6ನೇ ಹಂತದಲ್ಲಿ ಒಳಚರಂಡಿ ಕಾಮಗಾರಿಗೆ 54 ಕೋಟಿ ರೂ. ಹಣ ಬಿಡುಗಡೆ
ಬೆಂಗಳೂರಿನಲ್ಲಿ 1,109 ಸೇರಿದಂತೆ ರಾಜ್ಯಾಧ್ಯಂತ 1,249 ಮಂದಿಗೆ ಕೊರೋನಾ ದೃಢಪಟ್ಟಿದೆ. ಕೊರೋನಾ ಪಾಸಿಟಿವಿಟಿ ದರ 4.84ರಷ್ಟು ಆಗಿದೆ. ಕಳೆದ 24 ಗಂಟೆಯಲ್ಲಿ ಕೋವಿಡ್ ಸೋಂಕಿತರಾದಂತ ಬೆಂಗಳೂರಿನಲ್ಲಿ 1093 ಸೇರಿದಂತೆ 1,154 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಇಂದು 1,249 ಮಂದಿಗೆ ಕೋವಿಡ್ ದೃಢಪಟ್ಟ ಕಾರಣ, ಸಕ್ರೀಯ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ 5,393 ಸೇರಿದಂತೆ ರಾಜ್ಯಾಧ್ಯಂತ 5,707 ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
Covid numbers in Karnataka:
▪️New cases in State: 1,249
▪️New cases in B'lore: 1,109
▪️Positivity rate: 4.84%
▪️Discharges: 1,154(B'lore-1,093)
▪️Deaths: 2
▪️Active cases in State: 5,707
▪️Active cases in B'lore: 5,393
▪️Tests: 25,753#COVID19 #COVID— Dr Sudhakar K (@mla_sudhakar) June 29, 2022