ಬೆಂಗಳೂರು: ದೇಶದಲ್ಲಿ ಕೋವಿಡ್ ( Covid19 ) ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದಂತೇ, ಇತ್ತ ಕರ್ನಾಟಕದಲ್ಲಿಯೂ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿವೆ. ಇಂದು ರಾಜ್ಯಾಧ್ಯಂತ 78 ಮಂದಿಗೆ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಕಿಲ್ಲರ್ ಕೊರೋನಾಗೆ ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ.
ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ( Karnataka Health Department ) ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಳ್ಳಾರಿ, ಕೋಲಾರ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಮೂವರಿಗೆ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ಹಾವೇರಿ, ಕೊಪ್ಪಳ, ರಾಮನಗರ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರಿಗೆ, ಶಿವಮೊಗ್ಗ 07, ರಾಯಚೂರು 02, ಮೈಸೂರು 11, ಧಾರವಾಡ ಮತ್ತು ಬೀದರ್ ಇಬ್ಬರು ಬೆಂಗಳೂರು ನಗರ 35 ಸೇರಿದಂತೆ 78 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ.
ಇಂದು 78 ಮಂದಿಗೆ ಕೋವಿಡ್ ದೃಢಪಟ್ಟ ಕಾರಣ ಸೋಂಕಿತರ ಸಂಖ್ಯೆ 40,75,453ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 38 ಸೇರಿದಂತೆ ಈವರೆಗೆ 40,34,519 ಮಂದಿ ಗುಣಮುಖರಾಗಿದ್ದಾರೆ. ಈಗ 616 ಸಕ್ರೀಯ ಸೋಕಿತರು ಇದ್ದಾರೆ. ಇಂದು ಕೋವಿಡ್ ನಿಂದ ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. ಈವರೆಗೆ 40,276 ಮಂದಿ ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ.
ಶಿವಮೊಗ್ಗ: ನಾಳೆ ಸಾಗರ ತಾಲೂಕು ಸಾಹಿತ್ಯ ಸಮ್ಮೇಳನ, ಒಂದು ದಿನ ಸರ್ಕಾರಿ ನೌಕರರಿಗೆ ಓಓಡಿ ಸೌಲಭ್ಯ ಮಂಜೂರು