ಅಕ್ಟೋಬರ್ ನಲ್ಲಿ ‘ಕೋವಾಕ್ಸಿನ್’ 3ನೇ ಹಂತದ ಪ್ರಯೋಗ ಆರಂಭ – Kannada News Now


India

ಅಕ್ಟೋಬರ್ ನಲ್ಲಿ ‘ಕೋವಾಕ್ಸಿನ್’ 3ನೇ ಹಂತದ ಪ್ರಯೋಗ ಆರಂಭ

ಲಖನೌ: ವಿಶ್ವಾದ್ಯಂತ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಇದೀಗ ‘ಕೋವಾಕ್ಸಿನ್’ 3ನೇ ಹಂತದ ಪ್ರಯೋಗ ಅಕ್ಟೋಬರ್ ನಿಂದ ಲಖನೌ ಮತ್ತು ಗೋರಖ್​ಪುರದಲ್ಲಿ ಪ್ರಾರಂಭವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದೆ.

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ 3ನೇ ಹಂತದ ಪ್ರಯೋಗ ಅಕ್ಟೋಬರ್ ನಿಂದ ಲಖನೌ ಮತ್ತು ಗೋರಖ್​ಪುರದಲ್ಲಿ ಪ್ರಾರಂಭವಾಗಲಿದೆ ಎಂದು ಉತ್ತರ ಪ್ರದೇಶದ ಪ್ರಧಾನ ಆರೋಗ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.

ಕೋವಾಕ್ಸಿನ್ ಅಭಿವೃದ್ಧಿಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಭಾರತ್ ಬಯೋಟೆಕ್ ಜೊತೆ ಸಹಕರಿಸುತ್ತಿದೆ.
error: Content is protected !!