ಕೊಚ್ಚಿ (ಕೇರಳ): ಹೆಚ್ಚಿನ ಭದ್ರತೆಗಾಗಿ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡುವಾಗ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ವ್ಯಂಗ್ಯವಾಡಿದ ದಂಪತಿಯನ್ನು ಕೊಚ್ಚಿಯಲ್ಲಿರುವ ಕೊಚ್ಚಿನ್ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ನಿಂದ (ಸಿಐಎಎಲ್) ಅವರನ್ನು ಪ್ರಯಾಣಕ್ಕೆ ಅನುಮತಿಸದೇ ನೆಡುಂಬಶ್ಶೇರಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಏನಿದು ಘಟನೆ?
ಶನಿವಾರ ನಸುಕಿನ 1.45ರ ಸುಮಾರಿಗೆ ಪತ್ತನಂತಿಟ್ಟ ಮೂಲದ ಮಮ್ಮನ್ ಜೋಸೆಫ್ (63) ಮತ್ತು ಅವರ ಪತ್ನಿ ದುಬೈ ಮೂಲಕ ಆಸ್ಟ್ರೇಲಿಯಾದಲ್ಲಿರುವ ತಮ್ಮ ಮಗಳನ್ನು ಭೇಟಿ ಮಾಡಲು ಹೊರಟಿದ್ದರು. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅವರ ಬ್ಯಾಗ್ನಲ್ಲಿ ಏನಿದೆ ಎಂದು ಪದೇ ಪದೇ ಕೇಳಿದಾಗ ಕೋಪಗೊಂಡ ದಂಪತಿ ಬಾಂಬ್ ಇದೆ ಎಂದಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಭದ್ರತಾ ಸಿಬ್ಬಂದಿ ದಂಪತಿಯನ್ನು ಪ್ರಯಾಣಕ್ಕೆ ಅನುಮತಿಸದೇ ಅವರನ್ನು ನೆಡುಂಬಶ್ಶೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಕ ಹೆಚ್ಚಿನ ವಿಚಾರಣೆಯ ನಂತ್ರ ದಂಪತಿಯನ್ನು ಪೊಲೀಸರು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ದಂಪತಿ ಮತ್ತು ಚೆಕ್-ಇನ್ ಕೌಂಟರ್ ಅಧಿಕಾರಿಗಳ ನಡುವಿನ ಸಂಭಾಷಣೆಯು ಟರ್ಮಿನಲ್ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
Breaking news: ಮಹಾ ಅಸೆಂಬ್ಲಿ ಸ್ಪೀಕರ್ ಆಗಿ ಬಿಜೆಪಿಯ ʻರಾಹುಲ್ ನಾರ್ವೇಕರ್ʼ ಆಯ್ಕೆ