ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್-2 ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತ ಚಿತ್ರರಂಗದಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿರುವ ಈ ಚಿತ್ರದ ಪಾತ್ರಧಾರಿಗಳು ಪಡೆಯುವ ಸಂಭಾವನೆ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ.
ಅದರಲ್ಲೂ ರಾಕಿ ಭಾಯ್ ಯಶ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.
ಕೆಜಿಎಫ್ 2 ಸಿನಿಮಾ ನಟರ ಸಂಭಾವಣೆ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಲೇ ಇರುತ್ತೆ. ಕೆಜಿಎಫ್ 2 ಗಾಗಿ ಯಶ್, ಪ್ರಶಾಂತ್ ನೀಲ್, ಸಂಜಯ್ ದತ್ ಸೇರಿದಂತೆ ಹಲವು ನಟರ ಸಂಭಾವನೆ ಎಷ್ಟೆಷ್ಟು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. 3 ವರ್ಷದ ಶ್ರಮಕ್ಕಾಗಿ ಯಶ್ ಪಡೆದಿರುವ ಸಂಭಾವಣೆ ಎಷ್ಟು ಎಂದು ಜನರಿಗೆ ಆಗಾಗ ಕಾಡುತ್ತಲೇ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದ್ದು, ‘ಕೆಜಿಎಫ್ 2’ಗಾಗಿ ನಟ ಯಶ್ 25 ರಿಂದ 30 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕ್ರಿಸ್ ರಾಕ್ಗೆ ಕಪಾಳಮೋಕ್ಷ ಮಾಡಿದ ವಿಲ್ ಸ್ಮಿತ್ ನಡವಳಿಕೆ ಖಂಡನೀಯ, ಘಟನೆ ವಿರುದ್ಧ ಕ್ರಮಕ್ಕೆ ಭರವಸೆ
ಇನ್ನು ಉಳಿದಂತೆ ನಿರ್ದೇಶಕ ಪ್ರಶಾಂತ್ ನೀಲ್ 15 ರಿಂದ 20 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ‘ಕೆಜಿಎಫ್ ಪಾರ್ಟ್ 1’ ಮತ್ತು ಪಾರ್ಟ್ 2 ನಲ್ಲಿ ರಾಕಿ ಬಾಯ್ ಗ್ಲಾಮರ್ ಗೊಂಬೆಯಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿ ಕೂಡ ಈ ಸಿನಿಮಾಗಾಗಿ 3 ರಿಂದ 4 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ರವೀನಾ ಟಂಡನ್, ಪ್ರಕಾಶ್ ರಾಜ್, ಸಂಜಯ್ ದತ್ ಅವರಿಗೂ ದೊಡ್ಡ ಮೊತ್ತದ ಸಂಬಾವನೆ ಕೊಡಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.