ಬಿಜೀಂಗ್​​: ಚೀನಾದಲ್ಲಿ ಮತ್ತೆ ಕೋವಿಡ್​ ಅಬ್ಬರ ಶುರುವಾಗಿದ್ದು ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ದೇಶದಲ್ಲಿ ಸೋಂಕು ಹರಡುವುದನ್ನು ತಡೆಯಲು ಲಾಕ್​ಡೌನ್​, ಸಾಮೂಹಿಕ ಪರೀಕ್ಷೆ ಮತ್ತು ಪ್ರವಾಸ ನಿರ್ಬಂಧ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.

BIGG NEWS: ದೇವನಹಳ್ಳಿಯಲ್ಲಿ ಪೊಲೀಸ್‌ ಠಾಣೆ ಮೇಲೆ ಲೋಕಾಯುಕ್ತ ದಾಳಿ; ಕಾನ್ಸ್‌ ಟೇಬಲ್‌ ವಶಕ್ಕೆ

 

ಬುಧವಾರ 31,454 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 22,517 ಲಕ್ಷಣರಹಿತ ಸೋಂಕಿತರಿದ್ದಾರೆ ಎಂದು ನ್ಯಾಷನಲ್​ ಹೆಲ್ತ್​​ ಬ್ಯೂರೋ ತಿಳಿಸಿದೆ. ಚೀನಾದ 1.4 ಬಿಲಿಯನ್​ ಜನಸಂಖ್ಯೆಗೆ ಹೋಲಿಕೆ ಮಾಡಿ ನೋಡಿದಾಗ ಈ ಪ್ರಕರಣಗಳ ಸಂಖ್ಯೆ ಗಣನೀಯವಾಗಿದೆ. ಬೀಜಿಂಗ್​ನಲ್ಲಿ ಶೂನ್ಯ ಕೋವಿಡ್​ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಒಂದು ಪ್ರಕರಣ ಕಂಡು ಬಂದರೂ ಇಡೀ ನಗರವನ್ನು ಮುಚ್ಚಲಾಗುತ್ತಿದೆ. ಜೊತೆಗೆ ಸೋಂಕಿತರು ಪತ್ತೆಯಾದ ಪ್ರದೇಶವನ್ನು ಸಂಪೂರ್ಣವಾಗಿ ಸೀಜ್ ಮಾಡಿ ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ.

Share.
Exit mobile version