ಬ್ರೆಜಿಲ್ ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,49,113ಕ್ಕೆ ಏರಿಕೆ : ಒಂದೇ ದಿನದಲ್ಲಿ 965 ಜನ ಸಾವು – Kannada News Now


World

ಬ್ರೆಜಿಲ್ ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,49,113ಕ್ಕೆ ಏರಿಕೆ : ಒಂದೇ ದಿನದಲ್ಲಿ 965 ಜನ ಸಾವು

ಬ್ರೆಜಿಲ್ : ವಿಶ್ವಾದ್ಯಂತ ಕೊರೋನಾ ವೈರಸ್ ರಣಕೇಕೆಯಾಡುತ್ತಿದೆ. ಅಮೆರಿಕಾ, ಬ್ರೆಜಿಲ್, ಲಂಡನ್ ಮೊದಲಾದೆಡೆ ಕೊರೋನಾದಿಂದ ದಿನಕ್ಕೆ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.

ಬ್ರೆಜಿಲ್ ನಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಮೆರಿಕಾ ಮೊದಲನೇ ಸ್ಥಾನದಲ್ಲಿದೆ. ಶನಿವಾರ ಒಂದೇ ದಿನ ಬ್ರೆಜಿಲ್ ನಲ್ಲಿ 965 ಜನ ಕರೋನವೈರಸ್ ನಿಂದ ಸಾವನ್ನಪ್ಪಿದ್ದಾರೆ.

ಬ್ರೆಜಿಲ್ ನಲ್ಲಿ ಇಲ್ಲಿವರೆಗೆ 2,49,113 ಜನರಿಗೆ ಕೊರೋನಾ ಸೋಂಕು ತಗುಲಿದೆ. ಅಲ್ಲದೆ ಒಟ್ಟು ಸಾವುನೋವುಗಳ ಸಂಖ್ಯೆ 22,165 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.