BREAKING :ದೇಶದಲ್ಲಿ 50 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ : ಒಂದೇ ದಿನದಲ್ಲಿ 90 ಸಾವಿರ ಪ್ರಕರಣ ದಾಖಲು – Kannada News Now


India

BREAKING :ದೇಶದಲ್ಲಿ 50 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ : ಒಂದೇ ದಿನದಲ್ಲಿ 90 ಸಾವಿರ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬುಧವಾರ ಸೋಂಕಿತರ ಒಟ್ಟು ಸಂಖ್ಯೆ 50 ಲಕ್ಷ ಗಡಿ ದಾಟಿದೆ. ಈ ಮೂಲಕ ಅಮೆರಿಕಾ ಬಳಿಕ 50 ಲಕ್ಷ ಪ್ರಕರಣಗಳು ದಾಖಲಾದ 2ನೇ ರಾಷ್ಟ್ರ ಭಾರತವಾಗಿದೆ.

ಒಂದೇ ದಿನ ದೇಶದಲ್ಲಿ 90,123 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50,20,360ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 1,290 ಜನ ಸಾವನ್ನಪ್ಪಿದ್ದು, ಇದರೊಂದಿಗೆ ಈವರೆಗೂ ಸೋಂಕಿನಿಂದಾಗಿ 82,066 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ನಡುವೆ 50,20,360 ಮಂದಿ ಸೋಂಕಿತರ ಪೈಕಿ 39,42,361 ಮಂದಿ ಗುಣಮುಖರಾಗಿದ್ದು, 9,95,933 ಸಕ್ರಿಯ ಪ್ರಕರಣಗಳಿವೆ.