ಶಿವಮೊಗ್ಗ: ಕೋವಿಡ್ 3ನೇ ಅಲೆಯ ( Corona 3rd Wave ) ಆರ್ಭಟ ಶುರುವಾಗಿ ಅಂತ ಹೇಳಲಾಗುತ್ತಿದೆ. ಈ ಕಾರಣದಿಂದಲೇ ಕೊರೋನಾ ಲಸಿಕೆಯನ್ನು ( Corona Vaccine ) ತ್ವರಿತವಾಗಿ ನೀಡೋದಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ( Karnataka Government ) ಎಲ್ಲಾ ಹಂತದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕಾರಣದಿಂದಾಗಿಯೇ ಲಸಿಕಾಕರಣವನ್ನು ( Vaccination Drive ) ಜಿಲ್ಲೆ, ತಾಲೂಕಿನಲ್ಲಿಯೂ ತ್ವರಿತಗೊಳಿಸಲಾಗುತ್ತಿದೆ. ಇತ್ತ ಸಾಗರದಲ್ಲಿ ಲಸಿಕೆ ನೀಡುತ್ತೇವೆ. ಜ್ವರ ಬಂದ್ರೇ ಮಾತ್ರೆ ಹೊರಗೆ ತೆಗೆದುಕೊಳ್ಳಿ ಅಂತ ಹೇಳುತ್ತಿರೋದಾಗಿ ಕೇಳಿ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರದ ದೇವರಾಜ್ ಅರಸ್ ಭವನದಲ್ಲಿ ಕೋವಿಡ್ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು ನೀಡುತ್ತಿದ್ದಾರೆ. ಇಲ್ಲಿ ನೀಡುವಂತ ಕೋವಿಡ್ ಲಸಿಕೆಯನ್ನು ಅನೇಕರು ಪಡೆಯುತ್ತಿದ್ದಾರೆ. ಆದ್ರೇ.. ಲಸಿಕೆ ಪಡೆದಂತ ಅನೇಕರಿಗೆ ಲಸಿಕೆ ಪಡೆದ ನಂತ್ರ ಜ್ವರ ಬಂದ್ರೇ ನೀಡುವಂತ ಮಾತ್ರೆ ಮಾತ್ರ ನೀಡುತ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಅಂದಹಾಗೇ ಈ ಮೊದಲು ಸಾಗರದ ದೇವರಾಜ್ ಅರಸ್ ಭವನದಲ್ಲಿ ಕೋವಿಡ್ ಲಸಿಕೆ ಪಡೆದಂತವರಿಗೆ ಮಾತ್ರೆ ಕೂಡ ನೀಡಲಾಗುತ್ತಿತ್ತು. ನಂಜುಂಡ ಸ್ವಾಮಿ ನೇತೃತ್ವದಲ್ಲಿ ಮಾತ್ರಯನ್ನು ವಿತರಿಸಲಾಗುತ್ತಿತ್ತು. ಆದ್ರೇ ಈಗ ಬಾಯಿ ಮುಚ್ಚಿ ಕುಳಿತಿದ್ದಾರೆ ಅಂತ ಸಾರ್ವಜನಿಕರು ಕಿಡಿಕಾರಿದ್ದಾರೆ. ಈಗ ಇದೆ ಸಿಬ್ಬಂದಿಗಳು ಲಸಿಕೆ ಕೊಡುತ್ತೇವೆ ಮಾತ್ರೆಗಳು ಇಲ್ಲ ಎಂದು ಉಢಾಪೆಯ ಮಾತು ಆಡುತ್ತಿದ್ದಾರೆ ಎಂದು ಲಸಿಕೆಪಡೆದಂತ ಅನೇಕರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.
ಆತ್ಮಗೌರವ ಇರೋರಾರು ಮತ್ತೆ ಕಾಂಗ್ರೆಸ್ ಗೆ ವಾಪಾಸ್ ಹೋಗೋದಿಲ್ಲ – ಸಚಿವ ಬಿ.ಸಿ.ಪಾಟೀಲ್
ಹಾಗಾದ್ರೇ.. ಲಸಿಕೆ ಜೊತೆಗೆ ಬರುವ ಮಾತ್ರೆಗಳು ಎಲ್ಲಿ ಹೋಯಿತು ಎಂಬುದು ಸಾಗರದ ಜನತೆಯನ್ನು ಕಾಡುತ್ತಿರುವಂತ ಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟಂತ ಅಧಿಕಾರಿಗಳು, ಸಾಗರದ ಶಾಸಕರು ದೇವರಾಜ್ ಅರಸ್ ಭವನಕ್ಕೆ ಭೇಟಿ ನೀಡಿ, ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ವರದಿ: ಉಮೇಶ್ ಮೊಗವೀರ, ಸಾಗರ