ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಮಾನ ನಿಲ್ದಾಣಗಳಲ್ಲಿ ( Airport ) ನಿಗದಿ ಪಡಿಸಿರುವಂತ ಕೋವಿಡ್ ಪರೀಕ್ಷೆಗಳ ( Covid19 Test ) ಲಭ್ಯತೆಯ ದರವನ್ನು ನಿಗದಿ ಪಡಿಸಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ( Karnataka Health Department ) ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದು, ಒಮಿಕ್ರಾನ್ ವೈರಸ್ ( Omicron Variant ) ಪ್ರಕರಣ ವರದಿಯಾದ ನಂತ್ರ, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕಟ್ಟು ನಿಟ್ಟಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಕೇವಲ ತಪಾಸಣೆಗೆ ಒಳಪಡಿಸೋದಷ್ಟೇ ಅಲ್ಲದೇ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡೋ ಅಗತ್ಯವಿದೆ. ಈ ಹಿನ್ನಲೆಯಲ್ಲಿ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಲ್ಲಿನ ಕೋವಿಡ್ ಪರೀಕ್ಷಾ ಪ್ರಯೋಗಾಲಯದಲ್ಲಿನ ದರಗಳನ್ನು ಈ ಕೆಳಗಿನಂತೆ ನಿಗದಿ ಪಡಿಸಿರೋದಾಗಿ ತಿಳಿಸಿದೆ.
ಹೀಗಿದೆ.. ವಿಮಾನ ನಿಲ್ದಾಣಗಳಲ್ಲಿ ನಿಗದಿ ಪಡಿಸಿರುವಂತ ಕೊರೋನಾ ಪರೀಕ್ಷಾ ದರಪಟ್ಟಿ
- RT-PCR ಪರೀಕ್ಷೆ – ರೂ.500
- ಎಕ್ಸ್ ಪ್ರೆಸ್ ಟೆಸ್ಟ್ ನಡಿ Abbott ID ಪರೀಕ್ಷೆ ರೂ.3,000
- ಥೆರ್ಮೋ ಫಿಶೆರ್ ಅಕ್ಯುಲಾ ಪರೀಕ್ಷೆ ರೂ.1,500
- ಟಾಟಾ ಎಂಡಿ 3 ಜೆನ್ ಫಾಸ್ಟ್ ಪರೀಕ್ಷೆ ರೂ.1,200
- ಸೆಫೈಡ್ ಜೆನೆ ಎಕ್ಸ್ ಪರ್ಟ್ ಪರೀಕ್ಷೆ ರೂ.2,750