ಸುಭಾಷಿತ :

Monday, March 30 , 2020 1:43 AM

‘ಕೊರೊನಾ ಲಾಕ್‌ಡೌನ್‌’, ವಿಡಿಯೋ ಕಾಲ್‌ನಲ್ಲಿಯೇ ಮದುವೆಯಾದ ಜೋಡಿ


Thursday, March 26th, 2020 9:10 pm

ನ್ಯೂಸ್‌ಡೆಸ್ಕ್: ಕರೋನವೈರಸ್ ಲಾಕ್‌ಡೌನ್ ಮಧ್ಯೆ ಯುಪಿ ಯ ವರ ಮತ್ತು ಬಿಹಾರದ ವಧು  ಇಂಟರ್‌ನೆಟ್ ಸಹಾಯದಿಂದ ಮದ್ವೆ ಯಾಗಿರುವ ಘಟನೆ ನಡೆದಿದೆ.

ಕೋವಿಡ್ -19 ಪ್ರಕರಣಗಳು ಹೆಚ್ಚಾಗುವುದನ್ನು ತಡೆಯಲು ಇಡೀ ಭಾರತವು ಈಗ 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ. ಈ ನಡುವೆ ಮಹಿಳೆ ಮತ್ತು ಉತ್ತರ ಪ್ರದೇಶದ ಪುರುಷನ ನಡುವಿನ ವಿವಾಹ ನಡೆಯಬೇಕಾಗಿತ್ತು, ಆದರೆ ಇಬ್ಬರ ಮದ್ವೆ ನಡೆಯಲು ಸಾಧ್ಯವಾಗದ ಕಾರಣಕ್ಕೆ ಇಬ್ಬರು ಕೂಡ ವಿಡಿಯೋ ಕಾಲಿಂಗ್ ಮೂಲಕ ವಿವಾಹವಾದರು ಎನ್ನಲಾಗಿದೆ. ಸಾದಿಯಾ ನಸ್ರೀನ್ ಮತ್ತು ಡ್ಯಾನಿಶ್ ರಾಸಾ ಅವರು ವಿವಾಹ ಮಾರ್ಚ್ 23 ರಂದು ರಂದು ನಡೆಯಬೇಕಾಗಿತ್ತು, ಆದರೆ ಸಾಂಕ್ರಾಮಿಕ ರೋಗದಿಂದ ಪ್ರಯಾಣದ ನಿರ್ಬಂಧ ಮಾಡಿರುವ ಹಿನ್ನಲೆಯಲ್ಲಿ ಇಬ್ಬರ ಮದ್ವೆ ಸಾಧ್ಯವಾಗಲಿಲ್ಲ,. ಕೊನೆಗೆ ಇಬ್ಬರು ದಂಪತಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಖಾಜಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವನ್ನು ಆಚರಣೆ ಮಾಡಿದರು.

ವಿಡಿಯೋ ಕಾಲ್‌ನಲ್ಲಿ ಜೋಡಿ ಕಾಬೂಲ್‌ ಹೈ ಎಂದಿದ್ದು, ಸಂಬಂಧಿಕರು ಒಬ್ಬರನ್ನೊಬ್ಬರು ಆಲಂಗಿಸಿ ಮುಬಾರಕ್‌ ಹೋ ಎಂದಿರುವುದು ಈಗ ವೈರಲ್‌ ಆಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions