ಬೆಂಗಳೂರು : ಆಸ್ಪತ್ರೆಗೆ ದಾಖಲಾಗಲು ರಾಜ್ಯ ಸರ್ಕಾರದಿಂದ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
ಹೌದು, ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟವಾಗಿದ್ದು, ಪ್ರತಿನಿತ್ಯ 30,000 ಕ್ಕಿಂತ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಈ ಹಿನ್ನೆಲೆ ರಾಜ್ಯದ ಜನರಿಗೆ ಆಸ್ಪತ್ರೆಗೆ ದಾಖಲಾಗಲು ರಾಜ್ಯ ಸರ್ಕಾರದಿಂದ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
ತುರ್ತು ಆರೈಕೆ, ಚಿಕಿತ್ಸೆ ಅಗತ್ಯವಿದ್ದರಷ್ಟೆ ಆಸ್ಪತ್ರೆಗಳಿಗೆ ತೆರಳಬೇಕು. ಸೌಮ್ಯ ಲಕ್ಷಣಗಳಿದ್ದರೆ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಆದೇಶ ನೀಡಲಾಗಿದ್ದು, ಮುಂದಿನ 2 ವಾರದವರೆಗೆ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಹಲ್ಲು ನೋವು, ತಲೆ ನೋವು ಇತ್ಯಾದಿ ಸಮಸ್ಯೆಗಳಿದ್ದರೆ ಬೇಡ. ಜನರು ಆಸ್ಪತ್ರೆಗೆ ಹೋಗದಂತೆ ರಾಜ್ಯ ಸರ್ಕಾರದಿಂದ ಮನವಿ ಮಾಡಿದೆ.. ಹೊರರೋಗಿ ವಿಭಾಗಕ್ಕೆ ಬರುವವರಲ್ಲಿ ಹೆಚ್ಚೆಚ್ಚು ಸೋಂಕು ಪತ್ತೆ ಆಗುತ್ತಿದೆ. ಹೊರರೋಗಿ ವಿಭಾಗದಲ್ಲಿ ಜನ ಗುಂಪು ಸೇರದಂತೆ ಎಚ್ಚರವಹಿಸಿ ಎಂದು ಖಾಸಗಿ ಆಸ್ಪತ್ರೆಗಳಿಗೂ ರಾಜ್ಯ ಸರ್ಕಾರದಿಂದ ಸೂಚನೆ ಹೊರಡಿಸಲಾಗಿದೆ. ಅದೇ ರೀತಿ ತುರ್ತು ಪರಿಸ್ಥಿತಿಯಲ್ಲಷ್ಟೆ ಆಸ್ಪತ್ರೆಗೆ ತೆರಳಲು ಸರ್ಕಾರ ಮನವಿ ಮಾಡಿದೆ.
ರಾಜ್ಯದಲ್ಲಿ ಮತ್ತೆ ಇಂದು ಕೊರೋನಾ (Coronavirus ) ಮಹಾಸ್ಪೋಟವೇ ಉಂಟಾಗಿದೆ. ಬೆಂಗಳೂರಿನಲ್ಲಿ 22,284 ಸೇರಿದಂತೆ ರಾಜ್ಯಾಧ್ಯಂತ 32,793 ಜನರಿಗೆ ಕೋವಿಡ್ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ( Twitter ) ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಅವರು ಮಾಹಿತಿ ನೀಡಿದ್ದು, ಇದೇ ವೇಳೆ ಅವರು ಕಳೆದ 24 ಗಂಟೆಯಲ್ಲಿ 2,18,479 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಅಂತ ತಿಳಿಸಿದ್ದಾರೆ.
ಇವರಲ್ಲಿ ಬೆಂಗಳೂರಿನಲ್ಲಿ 22,284 ಸೇರಿದಂತೆ ರಾಜ್ಯದಲ್ಲಿ 32,793ಜನರಿಗೆ ಕೋವಿಡ್ ದೃಢಪಟ್ಟಿರೋದಾಗಿ ತಿಳಿಸಿದ್ದಾರೆ. ಇಂದು ರಾಜ್ಯದಲ್ಲಿ 32,793 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ ಶೇ. 15%ಕ್ಕೆ ಏರಿಕೆಯಾಗಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ 1,69,850ಕ್ಕೆ ಏರಿಕೆಯಾಗಿವೆ ಎಂದು ತಿಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 4,273 ಜನರು ಗುಣಮುಖರಾಗಿದ್ದಾರೆ. ಸೋಂಕಿನಿಂದಾಗಿ ಬೆಂಗಳೂರಿನಲ್ಲಿ 05 ಜನರು ಸೇರಿದಂತೆ 07 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
SCHOLARSHIP SSP 2021-22 : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ