ಯುಎಸ್‌ನಿಂದ ಆಗಮಿಸಿದ 21 ಜನರಿಗೆ ಸೋಂಕು : ದೇಶದಲ್ಲಿ ಒಂದೇ ದಿನದಲ್ಲಿ 6,767 ಕೊರೋನಾ ಸೋಂಕಿತರು ಪತ್ತೆ – Kannada News Now


India

ಯುಎಸ್‌ನಿಂದ ಆಗಮಿಸಿದ 21 ಜನರಿಗೆ ಸೋಂಕು : ದೇಶದಲ್ಲಿ ಒಂದೇ ದಿನದಲ್ಲಿ 6,767 ಕೊರೋನಾ ಸೋಂಕಿತರು ಪತ್ತೆ

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು , ಇಂದು ಮತ್ತೆ ಹೊಸ ಸೋಂಕಿತರ ಸಂಖ್ಯೆ 6 ಸಾವಿರ ಗಡಿ ದಾಟಿದ್ದು, ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1.25 ಲಕ್ಷ ಗಡಿ ದಾಟಿದೆ.

ಭಾರತದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ದಿನದಿಂದ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೊಬ್ಬರಿ 6,767 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,31,868ಏರಿಕೆಯಾಗಿವೆ.

ದೇಶದಲ್ಲಿ 69,597 ಸಕ್ರಿಯ ಪ್ರಕರಣಗಳಾಗಿವೆ. ಇನ್ನು 51,784 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3,867ಕ್ಕೆ ಏರಿಕೆಯಾಗಿದೆ.

ವಂದೇ ಭಾರತ್ ಮಿಷನ್‌ನ ಅಂಗವಾಗಿ ಯುಎಸ್‌ನಿಂದ ಹರಿಯಾಣಕ್ಕೆ ಆಗಮಿಸಿದ 73 ಜನರಲ್ಲಿ ಕನಿಷ್ಠ 21 ಜನರು ಕರೋನವೈರಸ್‌ಗೆ ತುತ್ತಾಗಿದ್ದಾರೆ ಎನ್ನಲಾಗಿದೆ.