ಮಂಗಳೂರು: ನಗರದಲ್ಲಿ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ.

BIGG NEWS: ಚಳಿಯಿಂದ ನಲುಗುತ್ತಿರುವ ಉತ್ತರ ಕರ್ನಾಟಕ ಮಂದಿ, ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಎಚ್ಚರಿಕೆ

 

ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಶಾರೀಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಶೇ.40 ರಷ್ಟು ಶಾರೀಕ್ ದೇಹ ಸುಟ್ಟು ಹೋಗಿದ್ದು, ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಖ ಬಾವು ಬಂದಿದ್ದ ಕಾರಣ ಪೊಲೀಸರಿಗೆ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅನುಮಾನದ ಹಿನ್ನೆಲೆಯಲ್ಲಿ ಶಾರೀಕ್ ಹೆತ್ತವರನ್ನು ಕರೆಸಿದ್ದಾರೆ. ಪೋಷಕರಿಗೂ ಶಾರೀಕ್ ಗುರುತು ಪತ್ತೆಯಾಗಲಿಲ್ಲ ಎಂದರೆ ಕೊನೆಗೆ ಡಿಎನ್‍ಎ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ.

BIGG NEWS: ಚಳಿಯಿಂದ ನಲುಗುತ್ತಿರುವ ಉತ್ತರ ಕರ್ನಾಟಕ ಮಂದಿ, ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಎಚ್ಚರಿಕೆ

 

ಸದ್ಯ ಮಂಗಳೂರಿನಲ್ಲೇ ಬೀಡು ಬಿಟ್ಟಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಶಾರೀಕ್ ಹೆತ್ತವರನ್ನೂ ವಿಚಾರಣೆ ನಡೆಸಲಿದ್ದಾರೆ. ನಿನ್ನೆಯಿಂದ ಶಾರೀಕ್ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಇದೀಗ ಮಾತನಾಡುವ ಸ್ಥಿತಿಯಲ್ಲಿ ಶಾರೀಕ್ ಇದ್ದಾನೆ. ಹೀಗಾಗಿ ಇಂದು ಪೊಲೀಸರಿಂದ ಶಾರೀಕ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಲಷ್ಕರ್ ಎ ತೋಯ್ಬಾ ಪರ ಗೋಡೆ ಬರಹ ಬರೆದಿದ್ದ ಶಾರೀಕ್, ಇತ್ತೇಚೆಗೆ ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನವಾದ ಬಳಿಕ ತಲೆಮರೆಸಿಕೊಂಡಿದ್ದನು.

Share.
Exit mobile version