ಬೆಂಗಳೂರು ರಾಜ್ಯ ಸರ್ಕಾರವು ನೂತನವಾಗಿ ಪರಿಷ್ಕರಿಸಿರುವ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ವಿಶ್ವಗುರು ಬಸವಣ್ಣನವರು-ಸಾಂಸ್ಕೃತಿಕ ನಾಯಕ’ ಎಂಬ ಪಾಠದಲ್ಲಿ ‘ವೀರಶೈವ’ ಎಂಬ ಪದವನ್ನು ತೆಗೆದು ಹಾಕಲಾಗಿದೆ ಅಂಥ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಆರೋಪ ಮಾಡಿದ್ದು, ಈಗ ಇದು ವಿವಾದಕ್ಕೆ ಕಾರಣವಾಗಿದೆ.

ಇದಕ್ಕೆ ಸಂಬಂಧಪಟ್ಟಂಥೆ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೂಡಲೇ ಆಗಿರುವ ತಪ್ಪುಗಳನ್ನು ಸರಿ ಪಡೆಸುವಂತೆ ಒತ್ತಾಯಿಸಿದ್ದಾರೆ. ಬಸವಣ್ಣ ಸೇರಿದಂತೆ 30ಕ್ಕೂ ಹೆಚ್ಚು ಶಿವಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದ ಬಳಕೆ ಮಾಡಿದ್ದಾರೆ. 10 ವಚನಗಳಲ್ಲಿ 21 ಕಡೆ ಮಾತ್ರ ಲಿಂಗಾಯತ ಪದ ಬಳಕೆ ಮಾಡಿದ್ದಾರೆ. ಆದರೆ, ಬಸವಣ್ಣ ಒಂದು ವಚನದಲ್ಲೂ ಲಿಂಗಾಯತ ಪದ ಬಳಕೆ ಮಾಡಿಲ್ಲ. ಒಂದು ವಚನದಲ್ಲಿ ತಾವು ನಿಜ ವೀರಶೈವ ಎಂದು ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಸವಣ್ಣನವರ ಪರಿಚಯವನ್ನು ಕುರಿತು 2016ರಿಂದ 3 ಮೂರು ಪರಿಷ್ಕರಣೆ ಮಾಡಲಾಗಿದೆ. 2016 ಮತ್ತು 2022ರ ಪಠ್ಯಪುಸ್ತಕದಲ್ಲಿರುವ ‘ವೀರಶೈವ’ ಪದವನ್ನು 2024ರಲ್ಲಿ ಡಾ. ಮಂಜುನಾಥ ಜಿ. ಹೆಗಡೆ ಅವ ನೇತೃತ್ವದಲ್ಲಿ ನಡೆದ ಪರಿಷ್ಕರಣೆಯಲ್ಲಿ ತೆಗೆದು ಹಾಕಲಾಗಿದೆ ಅಂಥ ಆರೋಪಿಸಲಾಗಿದೆ.

Share.
Exit mobile version