ರಾಮನಗರ: ಕಾಂಗ್ರೆಸ್‌ ಮುಖಂಡ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಯಾವ ಪಕ್ಷದ ನಾಯಕರು ಏನ್ ಹೇಳಿಕೆ ಕೊಡುತ್ತಾರೋ ಕೊಡಲಿ.  ಬೇರೆಯವರ ಹೇಳಿಕೆಗೆ ನಾನು ತಲೆ ಕೆಡಿಸಿಕೊಳ್ಳಲ್ಲʼ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

BIGG NEWS : ಸಾರ್ವಜನಿಕರೇ ಗಮನಿಸಿ : ಧ್ವಜಗಳನ್ನು ವಾಹನಗಳಲ್ಲಿ ಹಾರಿಸಿದರೆ 3 ವರ್ಷ ಜೈಲು ಶಿಕ್ಷೆ!

ಚನ್ನಪಟ್ಟಣ ತಾಲೂಕಿನ ಗರಕಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ , “ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕಿದೆ. ಜನತೆಗೆ ತಿಳುವಳಿಕೆ ಮೂಡಿಸುವುದು ಸೂಕ್ತ. ಇಲ್ಲಿ ಯಾವುದೇ ಪಕ್ಷಗಳಲ್ಲೂ, ಯಾವುದೇ ರೀತಿಯ ನೈತಿಕತೆ ಉಳಿದಿಲ್ಲ. ಹೀಗಾಗಿ ಇದಕ್ಕೆ ಹೆಚ್ಚಿನ ವ್ಯಾಖ್ಯಾನ ಅಗತ್ಯವಿಲ್ಲ

ಪ್ರಿಯಾಂಕ ಖರ್ಗೆ ಏನೋ ಪ್ರಸ್ತಾಪ ಮಾಡಿದ್ದಾರೆ. ಆದರೆ, ಅದನ್ನು ಬಿಜೆಪಿಯವ್ರು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಕ್ಷಮೆ ಕೇಳುವುದಾಗಿ ಖರ್ಗೆ ತಿಳಿಸಿದ್ದಾರೆ. ಯಾರಿಗಾದರೂ ನೋವಾದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಇದನ್ನು ಮತ್ತೆ ಎಳೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

BIGG NEWS : ಸಾರ್ವಜನಿಕರೇ ಗಮನಿಸಿ : ಧ್ವಜಗಳನ್ನು ವಾಹನಗಳಲ್ಲಿ ಹಾರಿಸಿದರೆ 3 ವರ್ಷ ಜೈಲು ಶಿಕ್ಷೆ!

ಇನ್ನು ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ವ್ಯಂಗ್ಯವಾಡಿದ ಮಾಜಿ ಸಿಎಂ ಹೆಚ್‌ಡಿಕೆ, “ಏನೋ ನನಗೆ ಕಮಿಷನ್ ಕೊಡುತ್ತಿದ್ರು ಎಂದಿದ್ದಾರೆ. ಅದೂ ನಾನು ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು. ನಾನು ರೈತನಾಗಿ ಬಾಳೆಗಿಡ ಬೆಳಸುವ ಸಂದರ್ಭದಲ್ಲಿ ಅವರೇ ಬಂದು ಬಾಳೆಗಿಡ ನೆಡಿಸಿಕೊಟ್ಟಿದ್ರು. ಮೆಗಾಸಿಟಿ ಪ್ರಾಜೆಕ್ಟ್ ನಲ್ಲಿ ಹಲವು ಜನಕ್ಕೆ ಟೋಪಿ ಹಾಕಿದ್ದರು. ಈ ದುಡ್ಡು ನನಗೆ ತಂದುಕೊಟ್ಟಿದ್ರು ಅಂದಿದ್ದಾರೆ ಅಲ್ವಾ? ಅಂತಾ ಪ್ರಶ್ನಿಸಿದ್ದಾರೆ.

BIGG NEWS : ಸಾರ್ವಜನಿಕರೇ ಗಮನಿಸಿ : ಧ್ವಜಗಳನ್ನು ವಾಹನಗಳಲ್ಲಿ ಹಾರಿಸಿದರೆ 3 ವರ್ಷ ಜೈಲು ಶಿಕ್ಷೆ!

ಈ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ನನ್ನ ಬಗ್ಗೆ ನೀರಾವರಿ ವಿಚಾರದಲ್ಲಿ ಲಘುವಾಗಿ ಮಾತನಾಡಿದ್ರು. ಅದಕ್ಕೆ ನಾನು ಹೇಳಿದ್ದು, ಅವರಷ್ಟು ನೀರಾವರಿ ತಜ್ಞ ಅಲ್ಲ ಅಂತಾ. ಅವರಿಗೆ ಸರ್ಟಿಫಿಕೇಟ್ ಕೊಟ್ಟಿದ್ದೇನೆ ಇನ್ನು ಈ ಬಗ್ಗೆ ಚರ್ಚೆ ಅನಗತ್ಯ” ಎಂದು ಹೇಳಿದ್ರು.

Share.
Exit mobile version