ಕನ್ಯಾಕುಮಾರಿ (ತಮಿಳುನಾಡು): ಕಾಂಗೆಸ್‌ ಪಕ್ಷದ ಬಹು ನಿರೀಕ್ಷಿತ 3,570 ಕಿಮೀ ದೂರದ ‘ಭಾರತ್ ಜೋಡೋ ಯಾತ್ರೆ(Bharat Jodo Yatra)’ಗೆ ಇಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಚಾಲನೆ ದೊರೆಯಲಿದೆ.

ಇಂದು ಕನ್ಯಾಕುಮಾರಿಯಲ್ಲಿ ನಡೆಯುವ ಬೃಹತ್ ರ್ಯಾಲಿಯಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಲಾಗುವುದು. ಉದ್ಘಾಟನೆಗೂ ಮುನ್ನ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶ್ರೀಪೆರಂಬದೂರಿನ ರಾಜೀವ್ ಗಾಂಧಿ ಸ್ಮಾರಕದಲ್ಲಿ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಕನ್ಯಾಕುಮಾರಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢದ ಭೂಪೇಶ್ ಬಘೇಲ್ ಭಾಗವಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಸ್ಟಾಲಿನ್ ಅವರು ಖಾದಿಯಿಂದ ಮಾಡಿದ ರಾಷ್ಟ್ರಧ್ವಜವನ್ನು ರಾಹುಲ್‌ ಗಾಂಧಿ ಅವರಿಗೆ ಹಸ್ತಾಂತರಿಸಲಿದ್ದಾರೆ.

ಈ ಯಾತ್ರೆಯು ಕನ್ಯಾಕುಮಾರಿಯಿಂದ ಶ್ರೀನಗರವರೆಗೆ ಸುಮಾರು 3,570 ಕಿ.ಮೀ ದೂರ ಸಾಗಲಿದ್ದು, 12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು ಐದು ತಿಂಗಳ ಕಾಲ ಸಾಗಲಿದೆ. ವಾಸ್ತವವಾಗಿ ಈ ಯಾತ್ರೆ ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಯಾತ್ರೆ ನಡೆಸಲಿದ್ದಾರೆ. ಸೆ. 11ಕ್ಕೆ ಯಾತ್ರೆಯು ಕೇರಳ ತಲುಪಲಿದೆ. ನಂತ್ರ ಸೆ. 30ಕ್ಕೆ ಕರ್ನಾಟಕಕ್ಕೆ ಆಗಮಿಸಲಿದ್ದು, 21 ದಿನಗಳ ಕಾಲ ಕರ್ನಾಟಕದಲ್ಲಿ ಸಾಗಲಿದೆ. ಇಲ್ಲಿಂದ ಉತ್ತರ ಭಾರತ ರಾಜ್ಯಗಳತ್ತ ಸಾಗಿ ಕೊನೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.

ಸೋನಿಯಾ ಗಾಂಧಿ ಅವರ ತಾಯಿ ಇತ್ತೀಚೆಗಷ್ಟೇ ಇಟಲಿಯಲ್ಲಿ ನಿಧನರಾದರು. ಹೀಗಾಗಿ, ಸೋನಿಯಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಿದೇಶದಲ್ಲೇ ಇದ್ದಾರೆ. ರಾಹುಲ್ ಗಾಂಧಿ ಮಂಗಳವಾರ ರಾತ್ರಿ ಚೆನ್ನೈಗೆ ಆಗಮಿಸಿದರು.

BIGG NEWS : ಸಚಿವ ಉಮೇಶ್ ಕತ್ತಿ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರಿನಲ್ಲಿ ನಿಲ್ಲದ ಮಳೆ: ಕುಟುಂಬ ಸಮೇತ ಸುರಕ್ಷಿತ ಸ್ಥಳಕ್ಕೆ ಟ್ರಾಕ್ಟರ್‌ನಲ್ಲಿ ಸಾಗಿದ ʻಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ʼ…. ವಿಡಿಯೋ

BIG NEWS: ಫೋನ್ ಟ್ಯಾಪಿಂಗ್ ಪ್ರಕರಣ: NSE ಮಾಜಿ ಸಿಇಒ ʻರವಿ ನಾರಾಯಣ್ʼ ಅರೆಸ್ಟ್ | Former NSE Chief Ravi Narain Arrested

Share.
Exit mobile version