ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ( Congress Party ) ಬಂದರೆ ಸುಪ್ರೀಂ ಕೋರ್ಟ್, ಇ.ಡಿ, ಸಿಬಿಐ ಬಂದ್ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ( MLC N Ravikumar ) ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾವು ಸಂವಿಧಾನ, ಕೋರ್ಟ್‍ಗಳು, ಸುಪ್ರೀಂ ಕೋರ್ಟ್, ಹೈಕೋರ್ಟ್, ಪ್ರಜಾಪ್ರಭುತ್ವ, ಸಂಸತ್ತಿಗಿಂತ ದೊಡ್ಡವರು ಎಂದು ಕಾಂಗ್ರೆಸ್‍ನವರು ಭಾವಿಸಿದ್ದಾರೆಯೇ? ರಾಷ್ಟ್ರಪತಿ, ಸುಪ್ರೀಂ ಕೋರ್ಟ್, ಸಿಬಿಐ, ಐಟಿ, ಇ.ಡಿ. ಇವೆಲ್ಲವೂ ನಮ್ಮ ಸಂವಿಧಾನ ವ್ಯವಸ್ಥೆಯಡಿ ಬರುತ್ತವೆ. ಸೋನಿಯಾ, ರಾಹುಲ್, ರಾಜ್ಯದ ಅತ್ಯುನ್ನತ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪ್ರತಿಭಟನಾನಿರತರು ತಾವು ಸಂವಿಧಾನ, ಸುಪ್ರೀಂ ಕೋರ್ಟ್, ಕಾನೂನಿಗಿಂತ ದೊಡ್ಡವರೇ ಎಂದು ಉತ್ತರ ಕೊಡಲಿ ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ‘ವಿದ್ಯುತ್ ಶಾಕ್’ನಿಂದ ವ್ಯಕ್ತಿ ಬಲಿ ಪ್ರಕರಣ: ಕಂಬಿ ಕಳವು ಮಾಡಲು ಹೋಗಿ ‘ಶಾಕ್’ನಿಂದ ಸಾವು – ಬೆಸ್ಕಾಂ ಸ್ಪಷ್ಟನೆ

ಇವತ್ತು ಮತ್ತು ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಕೇಂದ್ರ ಸರಕಾರದ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. ಇ.ಡಿ, ಐಟಿ, ಸಿಬಿಐ, ಕೋರ್ಟ್ ಇರಲಿ ಯಾರೇ ಇದ್ದರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಕರೆಯಬಾರದೆಂದು ಆಗ್ರಹವನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗಿದೆ. ಕೇಂದ್ರದ ನಿರ್ದೇಶನದಂತೆ ಇ.ಡಿ, ಐಟಿ, ಸಿಬಿಐ ಕಾರ್ಯ ನಿರ್ವಹಿಸುತ್ತಿವೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದರು.

ಇವೆಲ್ಲವೂ ಬಿಜೆಪಿ ಸರಕಾರ ಬಂದ ಬಳಿಕ ಸ್ಥಾಪಿತ ಸಂಸ್ಥೆಗಳಲ್ಲ. ಕಾಂಗ್ರೆಸ್ ಸರಕಾರವಿದ್ದಾಗಲೂ, ಸಂವಿಧಾನ ಅಳವಡಿಸಿದ ಬಳಿಕ, ಗಣತಂತ್ರ ವ್ಯವಸ್ಥೆ ಜಾರಿಯಾದ ನಂತರ ಈ ವ್ಯವಸ್ಥೆಗಳು ಜಾರಿಯಲ್ಲಿವೆ. ಕಾಂಗ್ರೆಸ್ ಸರಕಾರವು ಅಧಿಕಾರದಲ್ಲಿದ್ದಾಗ ನರೇಂದ್ರ ಮೋದಿ ಅವರನ್ನು ಇ.ಡಿ. ತನಿಖೆ ಮಾಡಿಲ್ಲವೇ?, ಸಿಬಿಐ ಅಮಿತ್ ಶಾ ಅವರ ತನಿಖೆ ನಡೆದಿಲ್ಲವೇ? ಅಮಿತ್ ಶಾ ಅವರು ಜೈಲಿಗೆ ಹೋಗಿರಲಿಲ್ಲವೇ? ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಮಾಜಿ ಸ್ವೀಕರ್ ರಮೇಶ್ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕಲು, ಬಗ್ಗುಬಡಿಯಲು ಕೇಂದ್ರ ಸರಕಾರ ಈ ರೀತಿ ಮಾಡುತ್ತಿದೆ ಎಂದು ಕಾಂಗ್ರೆಸ್ಸಿಗರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಅಂಥ ಅವಶ್ಯಕತೆ ಬಿಜೆಪಿಗೆ ಇಲ್ಲ. ನೀವು 60 ವರ್ಷ ಆಳಿದ್ದೀರಿ. ಅನೇಕ ಸರಕಾರಗಳನ್ನು ಕಿತ್ತು ಹಾಕಿದ್ದೀರಿ; ನೀವು ಪತ್ರಿಕೆಗಳನ್ನು ನಿರ್ಬಂಧಿಸಿದ್ದೀರಿ. ಕೋರ್ಟ್ ತೀರ್ಪನ್ನೇ ತಿರಸ್ಕರಿಸಿದ್ದೀರಿ ಎಂದರಲ್ಲದೆ, ಅದೇ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿಯವರು ಬಂಧಿತರಾಗಿದ್ದರು ಎಂದು ನೆನಪಿಸಿದರು. ಇದೆಲ್ಲವೂ ಗೊತ್ತಿದ್ದೂ ಪ್ರತಿಭಟನೆ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ಷೇಪಿಸಿದರು.

ನರೇಂದ್ರ ಮೋದಿ, ಅಮಿತ್ ಶಾ ಅವರ ವಿಚಾರಣೆ ವೇಳೆ ಬಿಜೆಪಿ ಹೋರಾಟ ಮಾಡಿತ್ತೇ? ನರೇಂದ್ರ ಮೋದಿ, ಅಮಿತ್ ಶಾ, ಎಲ್.ಕೆ.ಅಡ್ವಾಣಿ ಮತ್ತಿತರ ನಾಯಕರು ಸಂವಿಧಾನಕ್ಕಿಂತ ದೊಡ್ಡವರೆಂದು ನಾವು ಯಾವತ್ತೂ ಹೇಳಿಲ್ಲ. ನಾವು ಸಂವಿಧಾನ, ಕಾನೂನು ಕಟ್ಟಳೆಗೆ ಒಳಪಟ್ಟೇ ಆಡಳಿತ ಮಾಡುತ್ತಿದ್ದೇವೆ. ಇಂಥ ಪ್ರತಿಭಟನೆ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಿದರು.

ವಿಪತ್ತು ನಿರ್ವಹಣೆಯ ಕರ್ನಾಟಕ ವಿನೂತನ ಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ – ಸಿಎಂ ಬೊಮ್ಮಾಯಿ

ನಿನ್ನೆ ರಮೇಶ್‍ಕುಮಾರ್ ಅವರು ಸತ್ಯವನ್ನು ಹೇಳಿದ್ದು, ಅವರನ್ನು ಅಭಿನಂದಿಸುತ್ತೇನೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ಕಾಲದಲ್ಲಿ, ಮನಮೋಹನ್ ಆಡಳಿತಾವಧಿಯಲ್ಲಿ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಗಳಿಸಿಕೊಂಡಿದ್ದೇವೆ. ಈಗ ಸೋನಿಯಾ ಗಾಂಧಿ ಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗಬೇಕು. ಪ್ರತಿಭಟನೆ ಮಾಡಬೇಕು ಎಂದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಲೂಟಿ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ಈಗ ಪ್ರತಿಭಟನೆ ಮಾಡದೆ ಇದ್ದರೆ ಊಟದಲ್ಲೂ ಹುಳ ಬೀಳುತ್ತದೆ ಎಂಬ ಸತ್ಯವಾದ ಮಾತನ್ನೇ ಆಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರು ಬ್ರಿಟಿಷರಂತೆ ದೇಶದ ಜನರ ಹಣ, ಸಂಪತ್ತು ಲೂಟಿ ಮಾಡಿದ್ದಾರೆ ಎಂಬ ಜನರ ಹೇಳಿಕೆ ಸರಿಯಾಗಿದೆ. ಹಾಗಾಗಿಯೇ ಜನ ನಿಮಗೆ ಸರಿಯಾದ ಪಾಠ ಕಲಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಅಕ್ರಮದÀ ಒಂದು ಭಾಗವಷ್ಟೇ ಎಂದು ತಿಳಿಸಿದರು. ಇದರ ವಿಚಾರಣೆ ಆಗಬಾರದೇ? ಎಂದು ಕೇಳಿದರು.

BREAKING NEWS: ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ 2022 ಪ್ರಶಸ್ತಿ ಪ್ರಕಟ: ನಟ ಸೂರ್ಯ, ಅಜಯ್ ದೇವಗನ್ ಅತ್ಯುತ್ತಮ ನಟ ಪ್ರಶಸ್ತಿ | National Film Awards 2022

4 ದಿನಗಳಿಂದ ಸಂಸತ್ ಬಂದ್ ಮಾಡಲಾಗಿದೆ. ಅತ್ಯಂತ ಅವಹೇಳನಕಾರಿ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಕಾಂಗ್ರೆಸ್‍ಗೆ ಈ ನೆಲದ ಬಗ್ಗೆ, ಸಂವಿಧಾನ, ಇ.ಡಿ., ಕಾನೂನಿನ ವಿಚಾರದಲ್ಲಿ ಗೌರವ ಇಲ್ಲ. ಸೋನಿಯಾ, ರಾಹುಲ್, ಡಿ.ಕೆ.ಶಿವಕುಮಾರ್ ಸೇರಿ ಇವರಲ್ಲಿ ಬಹಳಷ್ಟು ಜನ ಜಾಮೀನಿನಡಿ ಹೊರಗಿದ್ದಾರೆ. ನಲಪಾಡ್ ತಮ್ಮ ಭಾಷಣದಲ್ಲಿ ಅತ್ಯಾಚಾರ ಶಬ್ದ ಬಳಸಿದ್ದು ಸದ್ದು ಮಾಡುತ್ತಿದೆ. ಏನು ಶಬ್ದ ಬಳಕೆ ಇದು? ಅವರೂ ಬೇಲ್ ಗಿರಾಕೀನೇ ಎಂದು ವಿವರಿಸಿದರು. ನೀವು ಪ್ರಾಮಾಣಿಕರಿದ್ದರೆ ಕುಂಬಳಕಾಯಿ ಕಳ್ಳ ಎಂದೊಡನೆ ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ ಎಂದು ಪ್ರಶ್ನಿಸಿದರು. ಸ್ವಾರ್ಥದ ಕಾರಣಕ್ಕೆ ಪ್ರತಿಭಟನೆ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವುದೇಕೆ ಎಂದು ಕೇಳಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸ್ವಾತಂತ್ರ್ಯ ಹೋರಾಟಗಾರರನೇಕರು ದೇಣಿಗೆ ಕೊಟ್ಟಿದ್ದಾರೆ. ಅಲ್ಲದೆ ಷೇರುದಾರರಾಗಿದ್ದಾರೆ. ಇದು ಸೋನಿಯಾ ಮತ್ತು ರಾಹುಲ್ ಅಪ್ಪನ ಮನೆ ಆಸ್ತಿಯಲ್ಲ. ಸಾವಿರಾರು ಕೋಟಿ ಆಸ್ತಿ ಇರುವ ಸಂಸ್ಥೆ ಇದು. ಇದರ ತನಿಖೆ ಮಾಡಬಾರದೇ ಎಂದು ಟೀಕಿಸಿದರು. ಇದು ಸತ್ವರಹಿತ, ಟೊಳ್ಳು ಹೋರಾಟ ಎಂದು ತಿಳಿಸಿದರು.

Share.
Exit mobile version