ಹಾವೇರಿ : ಕಾಂಗ್ರೆಸ್ ನವರಿಗೆ ಕುಕ್ಕರ್ ಎಂದರೆ ಬಹಳ ಇಷ್ಟ ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಅವರು ಹಿರೇಕೆರೂರಿನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಕಾಂಗ್ರೆಸ್ ನವರು ಚುನಾವಣೆ ಸಮಯದಲ್ಲಿ ಕುಕ್ಕರ್ ಕೊಟ್ಟು ಗೆಲ್ಲುತ್ತಾರೆ, ಹಾಗಾಗಿ ಕುಕ್ಕರ್ ಅಂದರೆ ಬಹಳ ಇಷ್ಟ. ಅದರಲ್ಲಿ ಬಾಂಬ್ ಇಟ್ಟರೂ ಅಲ್ಲ ಫ್ರೆಶರ್ ಕುಕ್ಕರ್ ಎನ್ನುತ್ತಾರೆ ಎಂದು ಸಿಎಂ ಲೇವಡಿ ಮಾಡಿದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ದೂರು ನೀಡಿರುವುದು ಅತ್ಯಂತ ಕೀಳಿ ಮಟ್ಟದ್ದು, ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನರಿಗೆ ಎಲ್ಲಾ ಗೊತ್ತಿದೆ. ಎಲ್ಲವೂ ಕಾನೂನಿನ ಪ್ರಕಾರ ನಡೆಯಲಿದೆ ಎಂದರು.
BIG NEWS: ಮತದಾರರಿಗೆ ತಲಾ 6000 ರೂ ಆಮಿಷ ಒಡ್ಡಿದ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ದೂರು
BIGG NEWS : ಗದಗದಲ್ಲಿ ‘ನಿಲ್ಲದ ಅಸ್ಪೃಶ್ಯತೆ ‘ ಕಿಚ್ಚು : ದಲಿತ ಕುಟುಂಬಗಳನ್ನು ‘ಬಹಿಷ್ಕಾರಿಸಿದ ಸವರ್ಣಿಯರು’