ಬಿಜೆಪಿಯಿಂದ ಜೋರು ಪ್ರಚಾರ, ಕಾಂಗ್ರೆಸ್‌ ನಾಯಕರು ಕಾಣೆಯಾಗಿದ್ದಾರೆ- ಆರ್‌.ಅಶೋಕ ವ್ಯಂಗ್ಯ

ಬೆಂಗಳೂರು: ಬಿಜೆಪಿಯಿಂದ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿ ನಡೆಯುತ್ತಿದ್ದರೆ, ಕಾಂಗ್ರೆಸ್‌ ನಾಯಕರು ಮಾತ್ರ ಓಡಿಹೋಗಿ ಕಾಣೆಯಾಗಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ವ್ಯಂಗ್ಯವಾಡಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಕಚೇರಿ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪ್ರಚಾರ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಸಚಿವರು ಸ್ಪರ್ಧಿಸುವ ನಿರೀಕ್ಷೆ ಇದ್ದರೂ, ಈಗ ಎಲ್ಲರೂ ಕಾಣೆಯಾಗಿದ್ದಾರೆ. ಯಾರೂ ಬೆಂಗಳೂರಿನಲ್ಲಿಲ್ಲದೆ ಹಳ್ಳಿಗಳಿಗೆ ಓಡಿಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಲೆ ಇರುವುದರಿಂದ ಕಾಂಗ್ರೆಸ್‌ ಸಚಿವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು … Continue reading ಬಿಜೆಪಿಯಿಂದ ಜೋರು ಪ್ರಚಾರ, ಕಾಂಗ್ರೆಸ್‌ ನಾಯಕರು ಕಾಣೆಯಾಗಿದ್ದಾರೆ- ಆರ್‌.ಅಶೋಕ ವ್ಯಂಗ್ಯ