ಮಂಗಳೂರು : ಕರಾವಳಿ ಜನತೆಗೆ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಮಂಗಳೂರನ್ನು ಐಟಿ ಮತ್ತು ಗಾರ್ಮೆಂಟ್ ಉದ್ಯಮದ ಹಬ್ ಮಾಡುವುದು ಕಾಂಗ್ರೆಸ್ ಸಂಕಲ್ಪವಾಗಿದೆ. ಇದಕ್ಕೆ ವಿಶೇಷ ಆಸಕ್ತಿ ವಹಿಸುವುದರ ಮೂಲಕ ಕರಾವಳಿಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮೀನುಗಾರ ಮೊಗವೀರ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಆಸಕ್ತಿ ವಹಿಸಲಿದೆ. ಎಲ್ಲಾ ಮೀನುಗಾರರಿಗೆ 10 ಲಕ್ಷದ ವಿಮೆ, 1 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಬೋಟ್ ಖರೀದಿಗೆ 25 ಲಕ್ಷದವರೆಗೆ ಸಬ್ಸಿಡಿ ಮುಂತಾಗಿ ಸೌಲಭ್ಯ ಒದಗಿಸಲಿದೆ. ಕರಾವಳಿ ಪ್ರದೇಶದ ಅಭಿವೃದ್ದಿಗಾಗಿ ವಾರ್ಷಿಕ 2500 ಕೋಟಿ ಅನುದಾನದೊಂದಿಗೆ ‘ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡುವ ಮೂಲಕ ಉದ್ಯೋಗ ಹೂಡಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಂಗ್ರೆಸ್ ಸಂಕಲ್ಪ ಮಾಡಿದೆ.
ಈಡಿಗ ಬಿಲ್ಲವ ಹಾಗು ಬಂಟರ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ‘ಅಭಿವೃದ್ಧಿ ಪ್ರಾಧಿಕಾರ’ಗಳನ್ನು ರಚಿಸಿ ವರ್ಷಕ್ಕೆ 250 ಕೋಟಿಯಂತೆ 5 ವರ್ಷಗಳಲ್ಲಿ ಎರಡೂ ಪ್ರಾಧಿಕಾರಗಳಿಗೆ 1250 ಕೋಟಿ ನೀಡುವುದು ಕಾಂಗ್ರೆಸ್ ಸಂಕಲ್ಪವಾಗಿದೆ. ಕರಾವಳಿ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಮಾರಕವಾಗಿರುವ ಹಳದಿ ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಹುಡುಕಲು ತಕ್ಷಣವೇ 50 ಕೋಟಿ ಅನುದಾನ ಹಾಗೂ ರೋಗ ಪರಿಹಾರಕ್ಕೆ ಹೆಚ್ಚಿನ ಸಂಶೋಧನೆಗೆ ಕ್ರಮ ವಹಿಸಲಾಗುವುದು ಎಂದಿದೆ.
ಮೀನುಗಾರ ಮೊಗವೀರ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಆಸಕ್ತಿ ವಹಿಸಲಿದೆ. ಎಲ್ಲಾ ಮೀನುಗಾರರಿಗೆ 10 ಲಕ್ಷದ ವಿಮೆ, 1 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಬೋಟ್ ಖರೀದಿಗೆ 25 ಲಕ್ಷದವರೆಗೆ ಸಬ್ಸಿಡಿ ಮುಂತಾಗಿ ಸೌಲಭ್ಯ ಒದಗಿಸಲಿದೆ. #ಕರಾವಳಿಗಾಗಿ_ಕಾಂಗ್ರೆಸ್#CongressforKaravali pic.twitter.com/IhCn4WoQxZ
— Karnataka Congress (@INCKarnataka) January 24, 2023
ಮಂಗಳೂರನ್ನು ಐಟಿ ಮತ್ತು ಗಾರ್ಮೆಂಟ್ ಉದ್ಯಮದ ಹಬ್ ಮಾಡುವುದು ಕಾಂಗ್ರೆಸ್ ಸಂಕಲ್ಪವಾಗಿದೆ. ಇದಕ್ಕೆ ವಿಶೇಷ ಆಸಕ್ತಿ ವಹಿಸುವುದರ ಮೂಲಕ ಕರಾವಳಿಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವುದು ನಮ್ಮ ಬದ್ಧತೆಯಾಗಿದೆ #ಕರಾವಳಿಗಾಗಿ_ಕಾಂಗ್ರೆಸ್#CongressforKaravali pic.twitter.com/mey8w6Ofhd
— Karnataka Congress (@INCKarnataka) January 24, 2023
ಏನಮ್ಮಾ..ಇಲ್ಲೂ ಬಂದಿದ್ದೀಯಾ..? : ಸಿದ್ದರಾಮಯ್ಯ ಮಾತಿಗೆ ನಾಚಿ ನೀರಾದ ನಿರೂಪಕಿ ..!
BIGG NEWS : 10 ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ : ಅಂಗನವಾಡಿ ಕಾರ್ಯಕರ್ತೆಯರ ಎಚ್ಚರಿಕೆ