ಸುಭಾಷಿತ :

Monday, February 24 , 2020 2:22 AM

BIGG NEWS ; ‘ಕೆಪಿಸಿಸಿ’ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು : ಗೊಂದಲದಲ್ಲಿ ‘ಕೈ’ ಹೈಕಮಾಂಡ್


Sunday, January 19th, 2020 9:44 pm

ಬೆಂಗಳೂರು :  ಉಪಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ಗುಂಡೂರಾವ್ ಅವರು ರಾಜೀನಾಮೆ ನೀಡಿದ್ದು, ಬಳಿಕ ಹಲವು ಮಂದಿ ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಮುಂದಾಗಿದ್ದರು. ಆದರೆ ಅಂತಿಮವಾಗಿ  ಎಐಸಿಸಿ ಡಿ.ಕೆ ಶಿವಕುಮಾರ್ಅವರೇ ಕೆಪಿಸಿಸಿ ಸಾರಥಿ ಎಂದು ಹೇಳಲಾಗುತ್ತಿದೆಯಾದರೂ, ಇನ್ನೂ ಕೂಡ ಅಧಿಕೃತ ಘೋಷಣೆಯಾಗಿಲ್ಲ

ಯೆಸ್, ಇನ್ನೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಗೊಂದಲ ಬಗೆಹರಿಯುವ ಹಾಗೆ ಕಾಣುತ್ತಿಲ್ಲ, ಶುಕ್ರವಾರ ಅಥವಾ ಶನಿವಾರ ಅಧ್ಯಕ್ಷ ಸ್ಥಾನ ಘೋಷಣೆಯಾಗುವ ನಿರೀಕ್ಷೆ ಇತ್ತು. ಆದರೆ ಭಾನುವಾರವೂ ಕೂಡ ಗೊಂದಲ ಬಗೆಹರಿದಿಲ್ಲ.

ಡಿಕೆಶಿ ಆಯ್ಕೆಗೆ ಸಿದ್ದರಾಮಯ್ಯ ಬಣ ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಡಿಕೆಶಿಗೆ ಸ್ಥಾನ ನೀಡಿದರೆ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಆದ್ದರಿದ ಹೈ ಕಮಾಂಡ್ ಸದ್ಯ ಯಾವುದೇ ತೀರ್ಮಾನವನ್ನು ಪ್ರಕಟ ಮಾಡಿಲ್ಲ.  ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ರಾಜ್ಯ ನಾಯಕರಲ್ಲಿ ಒಮ್ಮತದ ನಿರ್ಧಾರ ಮೂಡದೇ ಇರುವ ಕಾರಣದಿಂದಾಗಿ ಸದ್ಯ ಹೈಕಮಾಂಡ್ ಸುಮ್ಮನಾಗಿದೆ ಎನ್ನಲಾಗಿದೆ, ಅಲ್ಲದೇ ಮತ್ತೊಂದು ಸುತ್ತಿನ ಮಾತುಕತೆಯ ಬಳಿಕ ಅಧ್ಯಕ್ಷ ಸ್ಥಾನ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions