ಬೆಂಗಳೂರು : ಭಯೋತ್ಪಾದಕರು ಕುಕ್ಕರ್‌ನಲ್ಲಿ, ಹೋಟೆಲ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಹಾಗೆ ಕಾಂಗ್ರೆಸ್ ಬೆಲೆಯೇರಿಕೆಯ ಬಾಂಬ್ ಅನ್ನು ಕರ್ನಾಟಕದಲ್ಲಿ ಬ್ಲಾಸ್ಟ್ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಮುದ್ರಾಂಕ ಶುಲ್ಕ, ಆಸ್ತಿ ತೆರಿಗೆ, ಬಸ್ ದರ, ದಿನಬಳಕೆ ವಸ್ತುಗಳ ದರ ಏರಿಸಿದ ಬಳಿಕ ಈಗ ಪೆಟ್ರೋಲ್ & ಡಿಸೇಲ್ ದರವನ್ನು ಏರಿಸಿ ಕನ್ನಡಿಗರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅರಾಜಕತೆ ಏರಿದಂತೆ, ವಸ್ತುಗಳ ಬೆಲೆ ಸಹ ಇನ್ನಿಲ್ಲದಂತೆ ಏರುತ್ತಿರುವುದು, ಅವರ ದುರ್ಬಲ ಹಾಗೂ ಭ್ರಷ್ಟ ಆಡಳಿತಕ್ಕೆ ಸಾಕ್ಷಿ ಎಂದು ಕಿಡಿಕಾರಿದೆ.

Share.
Exit mobile version