ರಾಜರಾಜೇಶ್ವರಿ ನಗರದಲ್ಲಿ ‘ಕಾಂಗ್ರೆಸ್’ಗೆ ಬಿಗ್ ಶಾಕ್ : ‘ಕೈ ಕಾರ್ಪೊರೇಟ್’ಗಳ ದಂಡೇ ಬಿಜೆಪಿ ಸೇರ್ಪಡೆ – Kannada News Now


State

ರಾಜರಾಜೇಶ್ವರಿ ನಗರದಲ್ಲಿ ‘ಕಾಂಗ್ರೆಸ್’ಗೆ ಬಿಗ್ ಶಾಕ್ : ‘ಕೈ ಕಾರ್ಪೊರೇಟ್’ಗಳ ದಂಡೇ ಬಿಜೆಪಿ ಸೇರ್ಪಡೆ

ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆ ಕಾವೇರಿರುವ ಬೆನ್ನಲ್ಲಿಯೇ, ಕಾಂಗ್ರೆಸ್ ಗೆ ಆಡಳಿತಾರೂಢ ಬಿಜೆಪಿ ಬಿಗ್ ಶಾಕ್ ನೀಡಿದೆ. ಕಾಂಗ್ರೆಸ್ ಕಾರ್ಪೊರೇಟರ್ ಗಳ ದಂಡೇ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ, ಕಾಂಗ್ರೆಸ್ ಗೆ ಬಿಜೆಪಿ ಟಫ್ ಫೈಟ್ ನೀಡಿದೆ.

ಇಂದು ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಪೋರೇಟರ್ ಗಳ ಪಕ್ಷಾಂತರವೇ ನಡೆದಿದೆ. ಕಮಲ ಅಭ್ಯರ್ಥಿ ಮುನಿರತ್ನ ಬೆಂಬಲಿಸಿ, ಅನೇಕ ವಾರ್ಡ್ ಗಳ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೈ ಬಿಟ್ಟು, ಕಮಲ ಹಿಡಿದಿದ್ದಾರೆ.

ಕಾಂಗ್ರೆಸ್ ನ ಜಾಲಹಳ್ಳಿ, ಹೆಚ್ ಎಂಟಿ, ಯಶವಂತಪುರ, ಲಕ್ಷ್ಮೀ ದೇವಿನಗರ, ಕೊಟ್ಟಿಗೆಪಾಳ್ಯ ವಾರ್ಡ್ ಕಾರ್ಪೋರೇಟರ್ ಗಳು ಬಿಜೆಪಿ ಸೇರಿದ್ದಾರೆ. ಇಂತಹ ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನು ಆರ್ ಆರ್ ನಗರ ಬಿಜೆಪಿ ಚುನಾವಣಾ ಉಸ್ತುವಾರಿ ಹೊತ್ತಿರುವಂತ ಆರ್ ಅಶೋಕ್, ಅರವಿಂದ್ ಲಿಂಬಾವಳಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
error: Content is protected !!