ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆಶೀಲ ವಿಡಿಯೋ ಪ್ರಕರಣಕ್ಕೆ ಇದೀಗ ಬಿಜೆಪಿ ಮುಖಂಡ ಹೊಸ ಸಿಡಿಸಿದ್ದು, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಕ್ಷೇಪವಿದೆ ಎಂದು ಮಾಡುವುದೇ ಕಾಂಗ್ರೆಸ್ ನವರ ಗುರಿಯಾಗಿತ್ತು ಎಂದು ಗಂಭೀರವಾದಂತಹ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೂರು ದಿನದ ಹಿಂದೆ ಡಿಕೆ ಶಿವಕುಮಾರ್ ನನಗೆ ಕರೆ ಮಾಡಿದ್ದರು.ಸಂಧಾನಕ್ಕೆ ಶಿವರಾಮೇಗೌಡರನ್ನು ಕಳುಹಿಸಿದ್ದರು. ನನಗೆ ರಾತ್ರಿ 12:40ಕ್ಕೆ ಡಿಕೆ ಶಿವಕುಮಾರ್ ಕರೆ ಮಾಡಿದ್ದರು.ಮೋದಿ ಹಸ್ತಕ್ಷೇಪ ಇದೆ ಅಂತ ಪ್ರೂವ್ ಮಾಡುವುದೇ ಕಾಂಗ್ರೆಸ್ ನವರ ಗುರಿಯಾಗಿತ್ತು ಎಂದು ಆರೋಪಸಿದರು.

ಈ ಪ್ರಕರಣದ ಬಗ್ಗೆ ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶವಾಗಿತ್ತು.ಅದಕ್ಕಾಗಿ ಕೈಜೋಡಿಸಬೇಕು ಎಂದು ನನ್ನನ್ನು ಕರೆದಿದ್ದರು. ಹತ್ತಕ್ಕೂ ಹೆಚ್ಚು ಬಾರಿ ಶಿವರಾಮೇಗೌಡ ನನ್ನ ಭೇಟಿಯಾಗಿದ್ದಾರೆ. ಒಂದೊಂದು ಟೈಮ್ ಅಲ್ಲಿ ಒಂದೊಂದು ರೀತಿ ನನ್ನ ಜೊತೆಗೆ ಮಾತನಾಡಿದ್ದಾರೆ.ಈ ಕೇಸ್ ನಲ್ಲಿ ಯಾರನ್ನ ಸಿಕ್ಕಿಹಾಕಿಸಬೇಕೆಂದು ಮೊದಲೇ ನಿರ್ಧಾರವಾಗಿತ್ತು. ಮೋದಿ ಎಚ್ ಡಿ ಕೆ ಮುಗಿಸಬೇಕು ಎಂದು ಇವರ ಲೆಕ್ಕಾಚಾರವಾಗಿತ್ತು ಎಂದು ತಿಳಿಸಿದರು.

ಸಿಎಂ ಡಿಸಿಎಂ ಗೆ ಬಿಜೆಪಿ ಮುಖಂಡ ದೇವರಾಜೇಗೌಡ ನೇರ ಸವಾಲು ಹಾಕಿದ್ದು, ಮಾನನಷ್ಟ ಮೊಕದಮ್ಮೆ ಸಲುವಾಗಿ ನಾನೇ ನನ್ನ ಮನೆ ವಿಳಾಸ ನೀಡುತ್ತೇನೆ ಡಿಸಿಎಂ ಡಿಕೆ ಶಿವಕುಮಾರ್ ಗರಡಿಯಲ್ಲಿ ನಾನು ಬೆಳೆದಿದ್ದೇನೆ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಬೇಕಿದ್ರೆ ನನ್ನ ವಿರುದ್ಧ ಮಾನನಷ್ಟ ಮೊಕದಮ್ಮೆ ಹಾಕಲಿ. ಡಿಕೆ ಮೇಲೆ ಮಾಡಿದ ಆರೋಪ ಡಿಲೀಟ್ ಮಾಡಿ ಅಂದರು. ಎಸ್ಐಟಿ ಎಸ್ಪಿ ಅವರೇ ನನಗೆ ಹೇಳಿಕೆ ಬದಲಿಸಲು ಹೇಳಿದ್ರು ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಗಂಭೀರವಾದ ಆರೋಪ ಮಾಡಿದ್ದಾರೆ.ಡ್ರೈವರ್ ಕಾರ್ತಿಕ್ ಎಲ್ಲಿದ್ದಾನೆ ಅಂತ ಆ ಆಡಿಯೋದಲ್ಲಿ ಇದೆ ಬಿಗಿ ಆಗೋಕೆ ಏನು ಮಾಡಬೇಕು ಅದನ್ನು ಮಾಡಿ ಎಂದು ಶಿವರಾಮೇಗೌಡ ಹೇಳಿದರು ಎಂದು ಆರೋಪಿಸಿದರು.

Share.
Exit mobile version