ದೆಹಲಿ :  ಹಾಸ್ಯನಟ ರಾಜು ಶ್ರೀವಾಸ್ತವ ಅವರು ಕೊನೆಗೂ ಪ್ರಜ್ಞೆ ಮರಳಿದ್ದಾರೆ.. ಕಳೆದ 15 ದಿನ ಕಾಲ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಈ ಸುದ್ದಿ ಸಮಾಧಾನ ನೀಡಿದಂತಾಗಿದೆ.

ಆಗಸ್ಟ್ 10 ರಂದು ಹೃದಯಾಘಾತಕ್ಕೆ ಒಳಗಾದ ನಂತರ ರಾಜು ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದಾರೆ. ಅಂದಿನಿಂದ ಅವರು ಪ್ರಜ್ಞಾಹೀನರಾಗಿದ್ದರು ಆದರೆ ಗುರುವಾರ, ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಮತ್ತೆ ಪ್ರಜ್ಷೆ ಮರಳಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಗರ್ವಿತ್ ನಾರಂಗ್ ಹೇಳಿದರು.

BIGG BREAKING NEWS : ಸೆ.12 ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ : ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, “ರಾಜು ಶ್ರೀವಾಸ್ತವ ಅವರಿಗೆ 15 ದಿನಗಳ ನಂತರ ಇಂದು ಪ್ರಜ್ಞೆ ಬಂದಿದೆ, ದೆಹಲಿಯ ಏಮ್ಸ್ ವೈದ್ಯರು ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗಾಗಿ ಪ್ರಾರ್ಥಿಸುವಂತೆ ನಾನು ಅವರ ಅಭಿಮಾನಿಗಳಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ

Share.
Exit mobile version