BIGG NEWS : ರಾಜ್ಯದಲ್ಲಿ ‘ನವೆಂಬರ್’ನಲ್ಲಿ ಕಾಲೇಜು ಆರಂಭದ ಸುಳಿವು ನೀಡಿದ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ – Kannada News Now


State

BIGG NEWS : ರಾಜ್ಯದಲ್ಲಿ ‘ನವೆಂಬರ್’ನಲ್ಲಿ ಕಾಲೇಜು ಆರಂಭದ ಸುಳಿವು ನೀಡಿದ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ

ಬೆಂಗಳೂರು : ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಹಂತ ಹಂತವಾಗಿ ಶಾಲಾ-ಕಾಲೇಜುಗಳನ್ನು ಅಕ್ಟೋಬರ್ 15ರ ನಂತ್ರ ಆರಂಭಿಸುವಂತೆ ಸೂಚಿಸಲಾಗಿತ್ತು. ಈ ಬಳಿಕ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಕೂಡ ಹಂತ ಹಂತವಾಗಿ ಶಾಲಾ-ಕಾಲೇಜು ಆರಂಭಕ್ಕೆ ಸಲಹೆ ನೀಡಿತ್ತು. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ನವೆಂಬರ್ ನಲ್ಲಿ ಡಿಗ್ರಿ ಕಾಲೇಜು ಆರಂಭಕ್ಕೆ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಅನುಮತಿ ಬೆನ್ನಲ್ಲೇ ಯುಜಿಸಿ ಕೂಡ, ಮುನ್ನೆಚ್ಚರಿಕೆಯೊಂದಿಗೆ ಕಾಲೇಜು ತೆರೆಯಲು ಸಲಹೆ ಮಾಡಿದೆ. ಹಂತ ಹಂತವಾಗಿ ಶಾಲಾ-ಕಾಲೇಜು ಆರಂಭಕ್ಕೆ ಸಲಹೆ ನೀಡಿದೆ. ಮೊದಲ ಹಂತದಲ್ಲಿ ಡಿಗ್ರಿ ಕಾಲೇಜು ಆರಂಭಸಿವಂತೆ, ಎರಡನೇ ಹಂತದಲ್ಲಿ 8 ರಿಂದ 12ನೇ ತರಗತಿ ಆರಂಭಿಸಲು ಹಾಗೂ ಮೂರನೇ ಹಂತದಲ್ಲಿ 1-7ನೇ ತರಗತಿ ಓಪನ್ ಗೆ ಅವಕಾಶ ನೀಡಿದೆ ಎಂದು ತಿಳಿಸಿದರು.

ಇನ್ನೂ ಕೊರೋನಾ ಕಂಟ್ರೋಲ್ ಬಂದ್ರೆ ಮಾತ್ರ ಎಲ್ ಕೆ ಜಿ ಆರಂಭಕ್ಕೆ ಸಲಹೆ ಮಾಡಿದೆ. ಹೀಗಾಗಿ ನವೆಂಬರ್ ನಲ್ಲಿ ಡಿಗ್ರಿ ಕಾಲೇಜು ಆರಂಭಕ್ಕೆ ತಜ್ಞರ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ತಜ್ಞರೊಂದಿಗೆ ಚರ್ಚೆ ನಡೆಸಿ, ನವೆಂಬರ್ ನಲ್ಲಿ ಡಿಗ್ರಿ ಕಾಲೇಜು ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.




error: Content is protected !!