ಸುಭಾಷಿತ :

Wednesday, January 29 , 2020 9:35 PM

‘ಉನ್ನಾವೋ ಸಂತ್ರಸ್ತೆ’ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಿಂದ ’25 ಲಕ್ಷ ಪರಿಹಾರ’ ಘೋಷಣೆ


Saturday, December 7th, 2019 6:54 pm

ಉತ್ತರಪ್ರದೇಶ : ಉನ್ನಾವೋ ಸಂತ್ರಸ್ತೆಯಾಗಿ ಆರೋಪಿಗಳಿಂದ ಪೆಟ್ರೋಲ್ ಸುರಿದು ಶೇ.90ರಷ್ಟು ಸುಟ್ಟ ಗಾಯಗಳಿಂದ ದೆಹಲಿಯ ಸಫ್ಜರ್ ಜಂಗ್ ಆಸ್ಪತ್ರೆ ಸೇರಿದ್ದ ಸಂತ್ರಸ್ತೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. ಇಂತಹ ಸಂತ್ರಸ್ತೆಯ ಕುಟುಂಬಕ್ಕೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಇಡೀ ದೇಶವೇ ಬೆಚ್ಚಿ ಬಿಳಿಸುವಂತೆ ಮಾಡಿದ್ದ ಹೈದ್ರಾಬಾದ್ ಪಶು ವೈದ್ಯೆಯ ಮೇಲಿನ ಗ್ಯಾಂಗ್ ರೇಪ್, ಕೊಲೆಯ ಘಟನೆ ಇನ್ನೂ ಹಸಿ ಹಸಿಯಾಗಿರುವ ಮುನ್ನವೇ ಉನ್ನಾವೋದಲ್ಲಿ ಗ್ಯಾಂಗ್ ರೇಪ್ ಗೆ ಒಳಗಾಗಿದ್ದ ಸಂತ್ರಸ್ತೆಯ ಮೇಲೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಆರೋಪಿಗಳು ನಡು ರಸ್ತೆಯಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದಾಗಿ ಸಂತ್ರಸ್ತೆ ಶೇ.90ರಷ್ಟು ದೇಹ ಸುಟ್ಟು ಹೋಗಿತ್ತು.

ಹೀಗೆ ಸುಟ್ಟಿದ್ದಂತ ಸಂತ್ರಸ್ತೆಯನ್ನು ಗುರುವಾರದಂದು ಏರ್ ಲಿಫ್ಟ್ ಮೂಲಕ ದೆಹಲಿಯ ಸಂಫ್ಜರ್ ಜಂಗ್ ಆಸ್ಪತ್ರೆಗೆ ದಾಖಲಿಸಿ, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೇ ಇಂತಹ ಸಂತ್ರಸ್ತೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. ಇಂತಹ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಉತ್ತರಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಸಾಂತ್ವಾನ ಹೇಳಿದರು. ಅಲ್ಲದೇ ಸರ್ಕಾರದಿಂದ 25 ಲಕ್ಷ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions