ಬೆಂಗಳೂರು : ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಸೈಲೆಂಟ್, ಡಿಸಿಎಂ ಡಿಕೆ ಶಿವಕುಮಾರ್ ವೈಲೆಂಟ್ ಆಗಿದ್ದಾರೆ ಮಾಜಿ ಸಚಿವ ಅಶೋಕ್ ವಾಗ್ಧಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಇಂದು ವಾಗ್ಧಾಳಿ ನಡೆಸಿದ ಮಾಜಿ ಸಚಿವ ಅಶೋಕ್ ‘ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಸೈಲೆಂಟ್, ಡಿಸಿಎಂ ಡಿಕೆ ಶಿವಕುಮಾರ್ ವೈಲೆಂಟ್ ಆಗಿದ್ದಾರೆ. ಡಿಕೆಶಿ ಸಭೆಯಲ್ಲಿ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ ಎಂದು ಕಿಡಿಕಾರಿದರು. ಸಿಎಂ ಗಿಂತ ಮುಂಚೆ ಡಿಸಿಎಂ ಡಿಕೆಶಿಯೇ ಎಲ್ಲದಕ್ಕೂ ಮಾತನಾಡುತ್ತಾರೆ’ ಎಂದು ವಾಗ್ಧಾಳಿ ನಡೆಸಿದರು.
ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಸರ್ಕಾರ ಜನರನ್ನು ಮೋಡಿ ಮಾಡಿದೆ, ರಾಹುಲ್, ಪ್ರಿಯಾಂಕಾ ಬಂದು ಗ್ಯಾರೆಂಟಿ ಘೋಷಣೆ ಮಾಡಿದರು. ಗ್ಯಾರೆಂಟಿ ಕಾರ್ಡ್ ಗೆ ಸಿದ್ದರಾಮಯ್ಯ. ಡಿಕೆಶಿ ಸಹಿ ಮಾಡಿದರು. ದಾರಿಯಲ್ಲಿ ಹೋಗುವರಿಗೂ ಗ್ಯಾರೆಂಟಿ ಕಾರ್ಡ್ ನೀಡಿದ್ದರು. ಆದರೆ ಈಗ ದಾರಿಯಲ್ಲಿ ಹೋಗುವವರಿಗೆ ಗ್ಯಾರೆಂಟಿ ಕಾರ್ಡ್ ಕೊಡೋಕೆ ಆಗುತ್ತಾ ಎಂದು ಡಿಕೆಶಿ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
ನಾವು ಘೋಷಿಸಿರುವ 5 ಗ್ಯಾರೆಂಟಿಗಳು ಶೀಘ್ರವೇ ಜಾರಿಗೆ ಬರಲಿದೆ’ : ಸಚಿವ ರಾಮಲಿಂಗಾ ರೆಡ್ಡಿ ಭರವಸೆ
ಬೆಂಗಳೂರು : ನಾವು ಘೋಷಿಸಿರುವ 5 ಗ್ಯಾರೆಂಟಿಗಳನ್ನು ಶೀಘ್ರವೇ ಜಾರಿಗೆ ತರುತ್ತೇವೆ’ ಎಂದು ನೂತನ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ.
ಗ್ಯಾರೆಂಟಿ ಯೋಜನೆ ಜಾರಿ ಮಾಡದಿದ್ದರೆ ಜೂನ್ 1 ರಿಂದ ಪ್ರತಿಭಟನೆ ಮಾಡುತ್ತೇವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ನಾವು ಘೋಷಿಸಿರುವ 5 ಗ್ಯಾರೆಂಟಿಗಳನ್ನು ಶೀಘ್ರವೇ ಜಾರಿಗೆ ತರುತ್ತೇವೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 600 ಹೆಚ್ಚು ಭರವಸೆ ನೀಡಿತ್ತು, ಅದನ್ನು ಈಡೇರಿಸಿದ್ಯಾ..? ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು.ಮೋದಿ ಹಣ ಹಾಕಿದ್ರಾ ಎಂದು ಪ್ರಶ್ನಿಸಿದ್ದಾರೆ. ಇಂದು ಸಚಿವ ಸಂಪುಟ ವಿಸ್ತರಣೆ ಫೈನಲ್ ಆಗಲಿದೆ. 99 % ಸಚಿವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
ಇಂದಿನಿಂದ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಮಾವು, ಹಲಸಿನ ಮೇಳ : ಸಚಿವ ರಾಮಲಿಂಗಾ ರೆಡ್ಡಿ ಚಾಲನೆ