ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕು ಅವರು ನಮ್ಮ ಮನವಿಯನ್ನು ಆಲಿಸಬೇಕು ಎಂದು ಬಹಳ ದಿನಗಳಿಂದ ಶಾಸಕರ ಬೇಡಿಕೆಯಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಭೇಟಿಗೆ ಸಮಯ ನಿಗದಿ ಮಾಡಿದ್ದು, ಪ್ರತಿ ಗುರುವಾರ ಶಾಸಕರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ.

ಹೌದು ಬಹಳ ದಿನಗಳಿಂದ ಸಿಎಂ ಸಿಗಬೇಕು, ನಮ್ಮ ಮನವಿ ಆಲಿಸಲು ಟೈ ಕೊಡಿ ಎಂದು ಹಲವು ಶಾಸಕರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸಿದ್ದರಾಮಯ್ಯನವರು ಅಸ್ತು ಎಂದಿದ್ದು, ಹೀಗಾಗಿ ಪ್ರತಿ ಗುರುವಾರ ‌ಶಾಸಕರುಗಳ ಭೇಟಿಗೆ ಸಮಯ ನಿಗದಿ ಮಾಡಿದ್ದಾರೆ. ಜೊತೆಗೆ ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಹ ಸಿಎಂ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ಗುರುವಾರ ಸಂಜೆ 4:30 ರಿಂದ 6 ಗಂಟೆಯವರೆಗೆ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಮನವಿ ಸಲ್ಲಿಸಿ, ಅನುದಾನ, ಕ್ಷೇತ್ರಗಳ ಸಮಸ್ಯೆಗಳ ಕುರಿತು ಚರ್ಚಿಸಬಹುದಾಗಿದೆ. ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಹ ಸಿಎಂ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.ಇದೀಗ ಸಿಎಂ ಭೇಟಿಗೆ ಶಾಸಕಿ ನಯನ ಮೊಟಮ್ಮ, KMF ಎಂಡಿ ಮಾಜಿ ಶಾಸಕ ಭಿಮಾ ನಾಯಕ್, ಸಂಸದ ತುಕಾರಾಂ, ಸಾಗರ್ ಖಂಡ್ರೆ ಮತ್ತು ಸಚಿವ ರಾಮಲಿಂಗ ರೆಡ್ಡಿ ಆಗಮಿಸಿದ್ದಾರೆ.

Share.
Exit mobile version